ಬೆಂಗಳೂರು : ಕೆಲವೊಂದಿಷ್ಟು ಕಡೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ಮಾಡಲು ಅವಕಾಶ ಇಲ್ಲ ಎಂದು ಬ್ಯಾನರ್ ಹಾಕಲಾಗಿದೆ. ಬ್ಯಾನರ್ ಹಾಕಿದವರ ಹೆಸರೆ ಅಲ್ಲಿ ಇಲ್ಲ. ಯಾರು ಈ ರೀತಿಯ ಕೆಲಸ ಮಾಡಿದ್ದಾರೋ ಅಂತಹವರು ಹೇಡಿಗಳು ಎಂದು ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ ಆಕ್ರೋಶ್ ವ್ಯಕ್ತಪಡಿಸಿದರು.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಕೆಲ ಜಾತ್ರೆಗಳಲ್ಲಿ ಇತರೆ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಹೆಸರಿಲ್ಲದ ಬ್ಯಾನರ್ ಹಾಕಿದವರು ಕ್ರೂರ ಮನಸ್ಸಿನವರು. ಇದಕ್ಕೆ 95% ಯಾವ ಧರ್ಮದವರ ಬೆಂಬಲ್ಲ ಇಲ್ಲ ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ