ನವದೆಹಲಿ: ಹಿಜಾಬ್ ವಿಷಯವನ್ನು ರಂಜಿಸಬೇಡಿ, ಸಂವೇದನಾಶೀಲರಾಗಬೇಡಿ. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಹಿಜಾಬ್‍ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಕೀಲ ದೇವದತ್ ಕಾಮತ್ ಅವರು ಮತ್ತೊಮ್ಮೆ ತುರ್ತು ವಿಚಾರಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ ಈ ವಿಷಯವನ್ನು ರಂಜಿಸಬೇಡಿ.
ಪರೀಕ್ಷೆ ಹಾಗೂ ಹಿಜಾಬ್‍ಗೂ ಯಾವುದೇ ಸಂಬಂಧವಿಲ್ಲ.
ಪ್ರಸ್ತುತ ಮುಂದಿನ ವಿಚಾರಣೆ ದಿನಾಂಕವನ್ನು ತಿಳಿಸುತ್ತೇವೆ. ಆತುರ ಬೇಡ ಎಂದು ಸೂಚಿಸಿದೆ. ಮುಂದಿನ ಮಾ.28ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.
ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸಿ ಮಧ್ಯಂತರ ತೀರ್ಪು ನೀಡಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುತ್ತಾರೆ ಎಂದು ಅರ್ಜಿದಾರರ ಪರ ವಕೀಲ ದೇವದಾಸ್ ಕಾಮತ್ ಅವರು ಮನವಿ ಮಾಡಿದ್ದರು.
ನ್ಯಾಯಾಲಯವು ಯಾವುದೇ ನಿರ್ದಿಷ್ಟ ಸಮಯವನ್ನು ನೀಡಲು ಸದ್ಯ ಸಾಧ್ಯವಿಲ್ಲ. ತುರ್ತು ವಿಚಾರಣೆಯೂ ಅಗತ್ಯವಿಲ್ಲ. ಮಕ್ಕಳ ಪರೀಕ್ಷೆ ವಿಷಯವನ್ನು ಇದರಲ್ಲಿ ಸೇರಿಸಬೇಡಿ. ಸೂಕ್ತ ಸಮಯದಲ್ಲಿ ವಿಷಯದ ವಿಚಾರಣೆ ನಡೆಯಲಿದೆ. ಸಂಯಮ ಇರಲಿ, ಒತ್ತಡ ತರಬೇಡಿ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಈ ಹಿಂದೆ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಹೋಳಿ ಹಬ್ಬದ ನಂತರ ಇದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತ್ತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ