ಯುದ್ಧಪೀಡಿತ ಉಕ್ರೇನ್ ನಲ್ಲಿ ಮಾನವೀಯ ಬಿಕ್ಕಟ್ಟುಗಳು ಉಂಟಾಗಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಮಂಡಿಸಿದ ನಿರ್ಣಯಕ್ಕೆ ಸೋಲಾಗಿದೆ.
ರಷ್ಯಾದ ಪರ ಚೀನಾ ಮಾತ್ರವೇ ಮತ ಚಲಾಯಿಸಿದೆ. ಭಾರತ ಸೇರಿದಂತೆ 12 ರಾಷ್ಟ್ರಗಳು ತಟಸ್ಥ ನಿಲುವನ್ನು ತಳೆದವು. ಈ ನಿರ್ಣಯ ಅಂಗೀಕಾರವಾಗಲು 15 ರಾಷ್ಟ್ರಗಳ ಪೈಕಿ 9 ರಾಷ್ಟ್ರಗಳು ರಷ್ಯಾ ಪರವಾಗಿ ಮತ ಹಾಕುವ ಅಗತ್ಯವಿತ್ತು. ಆದರೆ ರಷ್ಯಾಕ್ಕೆ ಬೆಂಬಲ ಸಿಕ್ಕಿದ್ದು ಚೀನಾದಿಂದ ಮಾತ್ರ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಪ್ರಾರಂಭಿಸಿ ತಿಂಗಳು ಕಳೆದಿದೆ. ಲಕ್ಷಾಂತರ ಉಕ್ರೇನಿಯನ್ನರು ಯುದ್ಧದ ಕಾರಣದಿಂದ ವಸತಿ, ಆಹಾರವಿಲ್ಲದೆ ಮಾನವೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಯುದ್ಧವನ್ನು ಸಮರ್ಥಿಸಿಕೊಳ್ಳಲು ಉಕ್ರೇನ್ ನಲ್ಲಿ ಮಾನವೀಯ ಬಿಕ್ಕಟ್ಟುಗಳು ಉಂಟಾಗಿಲ್ಲ ಎಂದು ನಿರ್ಣಯ ಮಂಡಿಸಲು ಮುಂದಾದ ರಷ್ಯಾ ಸೋಲುಕಂಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ