ಇನ್ನು ಘಟನೆಯ ಕುರಿತಂತೆ ಶೋಭಾ ಎಂಬ ಮಹಿಳೆಯ ಮನೆಗೆ ಬೈಕಿನಲ್ಲಿ ಬಂದ ವ್ಯಕ್ತಿ ಮಾರಾಟದ ಕೋಳಿ ಇದೆಯೇ ಎಂದು ಕೇಳಿದ್ದು ಅದಕ್ಕೆ ಶೋಭಾರವರು ತಮ್ಮಲ್ಲಿ ಮಾರಾಟ ಮಾಡುವ ಕೋಳಿ ಇಲ್ಲ ಎಂದು ಹೇಳಿದ್ದರು.
ನಂತರ ಆತ ಇನ್ನೆರಡು ಮನೆಯಲ್ಲಿ ಕೋಳಿ ಇದೆಯ ಎಂದು ಕೇಳಿ ಬರುತ್ತೇನೆ ಎಂದು ಹೇಳಿ ಹೋಗಿದ್ದು ಸ್ವಲ್ಪ ಹೊತ್ತಿನಲ್ಲಿ ಮತ್ತೆ ವಾಪಸು ಬಂದು ಎಲ್ಲಿಯೂ ಕೋಳಿ ಸಿಗಲಿಲ್ಲ ಎಂದು ಹೇಳಿ ವಾಪಾಸು ಬಂದ್ದಿದ್ದಾನೆ.
ಈ ಸಂದರ್ಭದಲ್ಲಿ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ ಕಾಯಿಯನ್ನು ಕೊಯ್ಯತ್ತಿದ್ದ ಶೋಭಾ ಆತನಿಗೆ ಪ್ಲಾಸ್ಟಿಕ್ ತೊಟ್ಟೆಯನ್ನು ನೀಡಿ ಜಂಬು ನೇರಳೆ ಹಣ್ಣನ್ನು ನೋಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಆತ ಶೋಭಾರವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 1, 20, 000 ರೂ. ಮೌಲ್ಯದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದಾನೆ.
ಸದ್ಯ ಈ ಕುರಿತು ಹಿರಿಯಡ್ಕ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ