ಜೊತೆಗಿದ್ದುಕೊಂಡೆ ಸುಪಾರಿ ಕೊಟ್ಟು ಗಂಡನನ್ನ ಕೊಲೆ ಮಾಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ್ (41) ಕೊಲೆಯಾದ ಉದ್ಯಮಿಯಾಗಿದ್ದಾನೆ. ಉದ್ಯಮಿ ಪತ್ನಿ ಕಿರಣ್ ದೊಡ್ಡಬೊಮ್ಮನವರ್ (26) ಸೇರಿದಂತೆ ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ ಘಂಟಿ ಈ ಮೂರು ಜನರನ್ನ ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಮಾರ್ಚ್ 15 ರಂದು ಮಂಡೋಳಿ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಕೊಲೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಪತ್ನಿಯೆ ಆರೋಪಿ ಎಂದು ತಿಳಿದು ಶಾಕ್ ಆಗಿತ್ತು. ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ್ ಜತಗೆ ರಾಜು ವಿವಾಹ ಆಗಿದ್ದ. ಅಲ್ಲದೆ ರಾಜು ಮೂರು ಜನರನ್ನು ಮದುವೆಯಾಗಿದ್ದ. ತನ್ನ ವ್ಯವಹಾರದಲ್ಲಿ ಉಳಿದ ಪಾಲುದಾರರಿಗೆ ಸರಿಯಾಗಿ ಹಣ ಕೊಟ್ಟಿರಲಿಲ್ಲವಂತೆ ಇದರಿಂದ ರಾಜುವಿನ ಮೇಲೆ ಎಲ್ಲರಿಗೂ ಕೋಪವಿತ್ತು. ಅದೆ ಕಾರಣಕ್ಕೆ ಪತ್ನಿ ಕಿರಣ್ ಸೇರಿದಂತೆ ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ ಘಂಟಿ ಕೂಡಿಕೊಂಡು 10 ಲಕ್ಷ ರೂಪಾಯಿಗೆ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ..
ರಾಜು ಕೊಲೆಯಾದ ದಿನ ಅಂತ್ಯಕ್ರಿಯೆ ಸೇರಿ ಎಲ್ಲ ಕಾರ್ಯದಲ್ಲಿ ಪತ್ನಿ ಕಿರಣ್ ಭಾಗಿಯಾಗಿದ್ದಳು.. ಪ್ರಕರಣ ಸಂಬಂಧ ಮೂರು ಜನ ಆರೋಪಿಗಳ ಬಂಧನವಾಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ..
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ