ಮಾಸ್ಕೊ: ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಮಾತ್ರ ರಷ್ಯಾ ಅಣ್ವಸ್ತ್ರ ಬಳಕೆ ಮಾಡಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಟ್ರಿ ಪೆಸ್ಕೋವ್ ಹೇಳಿದ್ದಾರೆ.
"ನಮ್ಮಲ್ಲಿ ಆಂತರಿಕ ಭದ್ರತೆಯ ಪರಿಕಲ್ಪನೆ ಇದೆ; ಇದು ಬಹಿರಂಗ. ಅಣ್ವಸ್ತ್ರ ಬಳಸಲು ಎಲ್ಲ ಕಾರಣಗಳನ್ನು ನೀವು ವಿಶ್ಲೇಷಿಸಬಹುದು" ಎಂದು ಪೆಸ್ಕೋವ್ ನುಡಿದರು. "ಆದ್ದರಿಂದ ನಮ್ಮ ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ನಮ್ಮ ಪರಿಕಲ್ಪನೆಗೆ ಅನುಸಾರವಾಗಿ ಅಣ್ವಸ್ತ್ರ ಬಳಸಲಾಗುವುದು" ಎಂದು ಸ್ಪಷ್ಟಪಡಿಸಿದರು.
ವ್ಲಾದಿಮಿರ್ ಪುಟಿನ್ ಅವರು ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿರುವುದು ನಿಮಗೆ ಸಮಾಧಾನ ಅಥವಾ ವಿಶ್ವಾಸ ತಂದಿದೆಯೇ ಎಂದು ಸಿಎನ್‍ಎನ್ ಸಂದರ್ಶನಕಾರರು ಕೇಳಿದ ಪ್ರಶ್ನೆಗೆ ಪೆಸ್ಕೋವ್ ಈ ಉತ್ತರ ನೀಡಿದರು.
ಪೆಸ್ಕೋವ್ ಹೇಳಿಕೆ ಹಿನ್ನೆಲೆಯಲ್ಲಿ ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ, ರಷ್ಯಾದ ಸಂಭಾವ್ಯ ಅಣ್ವಸ್ತ್ರ ಬಳಕೆ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. "ಜವಾಬ್ದಾರಿಯುತ ಅಣ್ವಸ್ತ್ರ ಹೊಂದಿದ ದೇಶ ನಡೆದುಕೊಳ್ಳುವ ರೀತಿ ಇದಲ್ಲ" ಎಂದೂ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ