Slider

ಕರಾವಳಿಯಲ್ಲಿ ಜೋರಾಯ್ತು ಧರ್ಮ ಯುದ್ಧ ಹಿಂದೂ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ22-3-2022

ಕರಾವಳಿಯಲ್ಲಿ ಧರ್ಮ ಸಮರ ಜೋರಾಗಿದ್ದು, ಉಡುಪಿ ಬಳಿಕ ಇದೀಗ ಮಂಗಳೂರಿನಲ್ಲೂ ಧರ್ಮ ಯುದ್ಧ ಆರಂಭವಾಗಿದೆ. ಕರಾವಳಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಲಾಗಿದೆ.ಕರ್ನಾಟಕ ಕರಾವಳಿಯಲ್ಲೀಗ ಜಾತ್ರೋತ್ಸವಗಳ ಸೀಸನ್ ಆಗಿದೆ.ಬಹುತೇಕ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳೇ ಹೊಟ್ಟೆಪಾಡಾಗಿದೆ. ಆದರೆ ಹಿಜಾಬ್ ಸಂಘರ್ಷದ ಬಳಿಕ ಕರಾವಳಿಯ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಮಾಡಲಾಗಿದ್ದು, ಕಾಪು, ಪುತ್ತೂರು ಸೇರಿ ಹಲವೆಡೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ.

ಕಾಪು ಮಾರಿಗುಡಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲ , ಪುತ್ತೂರು ಮಹಾಲಿಂಗೇಶ್ವರ, ಮಂಗಳೂರಿನ ಮಂಗಳಾದೇವಿ, ಕರಾವಳಿಯ ಹಲವು ದೇಗುಲಗಳಲ್ಲಿ ವ್ಯಾಪಾರ ನಿರ್ಬಂಧ ಹೇರಲಾಗಿದೆ. ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ದೇವಸ್ಥಾನಗಳ ಮುಂಭಾಗ ಬ್ಯಾನರ್​ ಅಳವಡಿಕೆ ಮಾಡಲಾಗಿದೆ.
ಏಲಂ ಪ್ರಕಟಣೆಯಲ್ಲಿ ದೇವಸ್ಥಾನ ಸಮಿತಿಗಳಿಂದ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಏಪ್ರಿಲ್ - ಮೇ 2 ತಿಂಗಳಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಸುಮಾರು 100 ಕೋಟಿಗೂ ಮೀರಿ ವಹಿವಾಟು ಆಗುತ್ತದೆ ಎಂದು ತಿಳಿಸಿದೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ N. ಶಶಿಕುಮಾರ್ ಮಾತನಾಡಿ ಬ್ಯಾನರ್ ಯಾರು ಹಾಕಿದ್ದು ಅನ್ನೋ ಬಗ್ಗೆ ತನಿಖೆ ಮಾಡುತ್ತೇವೆ. ಈ ಬಗ್ಗೆ ಕಾನೂನು ತಜ್ಞರ ಬಳಿ ಮಾಹಿತಿ ಕೇಳಿದ್ದೇವೆ. ಆಡಳಿತ ಮಂಡಳಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದಿದೆ. ಆಡಳಿತ ಮಂಡಳಿ ದೂರು ನೀಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ಧಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo