Slider

*ಮೇಕೆದಾಟು ಯೋಜನೆ- ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ* 21-3-2022

*ಮೇಕೆದಾಟು ಯೋಜನೆ- ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ*

ನವದೆಹಲಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ಮುಂದುವರಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿದೆ. ಇಂದು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಗೊತ್ತುವಳಿ ಮಂಡಿಸಿದ್ದಾರೆ.ದುರೈ ಮುರುಗನ್ ಮಂಡಿಸಿದ ನಿರ್ಣಯಕ್ಕೆ ತಮಿಳನಾಡಿನ ಎಲ್ಲಾ ಪಕ್ಷಗಳು ಸಮ್ಮತಿ ಸೂಚಿಸಿ ಅಂಗೀಕರಿಸಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಒಕ್ಕೂರಲಿನಿಂದ ಆಗ್ರಹಿಸಿವೆ.

ಈ ನಿರ್ಣಯಕ್ಕೆ ವಿಶೇಷವಾಗಿ ತಮಿಳುನಾಡು ಬಿಜೆಪಿ ಕೂಡಾ ಬೆಂಬಲ ನೀಡಿದೆ. ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡದಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಸುಪ್ರೀಂಕೋರ್ಟ್‍ನಲ್ಲಿದ್ದು, ವಿಚಾರಣೆ ಬಾಕಿ ಇರುವಾಗಲೇ ಕಾವೇರಿ ನೀರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದಕ್ಕೆ ಠಕ್ಕರ್ ಕೊಡಲು ಹೊರಟ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರ, ಕೇಂದ್ರದಿಂದ ಅನುಮತಿ ಸಿಗದ ಯೋಜನೆಗೆ ಈ ಬಾರಿಯ ಬಜೆಟ್‍ನಲ್ಲಿ 1000 ಕೋಟಿ ಹಣವನ್ನು ಮೀಸಲಿಟ್ಟಿತ್ತು.


ರಾಜ್ಯ ಸರ್ಕಾರದ ಇದೇ ನಿರ್ಧಾರವನ್ನು ಮುಂದಿಟ್ಟುಕೊಂಡು ಈಗ ತಮಿಳುನಾಡು ಹೋರಾಟ ಮುಂದುವರಿಸಿದೆ. ಒಂದು ಕಡೆ ಸುಪ್ರೀಂಕೋರ್ಟ್‍ನಲ್ಲಿ ಧಾವೆ ಹೂಡಿ ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿರುವ ತಮಿಳುನಾಡು, ಮತ್ತೊಂದು ಕಡೆ ಯೋಜನೆಗೆ ಯಾವುದೇ ಅನುಮತಿಗಳು ನೀಡದಂತೆ ಕೇಂದ್ರ ಸರ್ಕಾರಕ್ಕೆ ನಿರಂತರ ಒತ್ತಡ ಹೇರುತ್ತಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo