Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಸಾಸ್ತಾನ:-ಶಿವನ ದರ್ಶನ ಪಡೆಯುವುದರೊಂದಿಗೆ ಅಪ್ಪುವಿನ ದರ್ಶನ ಪಡೆದ ಭಕ್ತ ಸಮೂಹ2-3-2022

ಸಾಸ್ತಾನ : ಉಡುಪಿ ಜಿಲ್ಲೆಯ ಶಿವಕೃಪ ಕಲ್ಯಾಣ ಮಂಟಪ ಸಾಸ್ತಾನ ಇದರ ಸಮೀಪವಿರುವ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹಲವಾರು ಭಕ್ತರು ಆಗಮಿಸಿ ಶಿವನ ದರ್ಶನವನ್ನು ಪಡೆಯುವುದರೊಂದಿಗೆ ಶಿವನಿಗೆ ಪ್ರಿಯವಾದ ಸೇವೆಗಳನ್ನು ನೀಡಿ ಮಹಾಶಿವರಾತ್ರಿಯನ್ನು ಆಚರಿಸಿದರು.

ವರ್ಷಂಪ್ರತಿ ಈ ದೇವಾಲಯದಲ್ಲಿ ಶಿವರಾತ್ರಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ವಿಶೇಷವಾಗಿದೆ. ಈ ವೇಳೆ ಭಕ್ತರು ಶಿವನ ದರ್ಶನವನ್ನು ಪಡೆಯುವುದರೊಂದಿಗೆ ಕನ್ನಡ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ದರ್ಶನವನ್ನು ಪಡೆದುಕೊಂಡಿರುವುದು ವಿಶೇಷ.

ಹೌದು, ಇಲ್ಲಿ ಶಿವರಾತ್ರಿಯ ವಿಶೇಷವಾಗಿ ಮಹೇಶ್ ಪ್ರಸಾದ್ ಹಾಗೂ ರಾಜೇಶ್ ಶಬರಿಯವರು ಅಪ್ಪುವಿನ ಅಪ್ಪಟ ಅಭಿಮಾನಿಯಾಗಿದ್ದು ಫ್ಲೈವುಡ್ ನಲ್ಲಿ ಅಪ್ಪು ಪ್ರತಿಮೆಯನ್ನು ನಿರ್ಮಿಸಿ ದೇವಸ್ಥಾನದ ಬಲಬಾಗದಲ್ಲಿ ಇರಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಜನರೆಲ್ಲಾ ಅಪ್ಪುವಿನ ಪ್ರತಿಮೆ ನೋಡಿ ಖುಷಿ ಪಟ್ಟಿದ್ದು ಅಪ್ಪುವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವುದರೊಂದಿಗೆ ಸಂಭ್ರಮ ಪಟ್ಟರು.

ಅಪ್ಪು ನಮ್ಮ ಕಣ್ಣಮುಂದೆ ಜೀವಂತವಾಗಿದ್ದಾರೆ. ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅಪ್ಪು ಬಿಟ್ಟು ಹೋಗಿದ್ದಾರೆ ಎಂದು ಎಣಿಸಲು ನಮ್ಮಿಂದ ಸಾಧ್ಯವಿಲ್ಲ. ಅಪ್ಪು ಮರಣಹೊಂದಿದರು ಅವರು ಜನರಿಗೆ ನೀಡಿದ ಪ್ರೀತಿ, ಸಹಕಾರ, ಸಾಮಾಜಿಕ ಕಾರ್ಯಗಳು ಅವರು ಜೀವಂತವಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಅಪ್ಪುವಿನ ಅಪ್ಪಟ ಅಭಿಮಾನಿ ಮಹೇಶ್ ಪ್ರಸಾದ್ ಅವರು ಉಡುಪಿ ಫಸ್ಟ್ ನ ಜೊತೆ ಹಂಚಿಕೊಂಡಿದ್ದಾರೆ.
ಇವರ ಈ ಒಂದು ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿದಲ್ಲದೆ ಶಿವಕೃಪ ಗೆಳೆಯರ ಬಳಗ‌‌ ಸಾಸ್ತಾನ ಇವರು ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo