ಉಕ್ರೇನ್ನಲ್ಲಿ ನಡೆದ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವನ್ನಪ್ಪಿದ್ದರು. ಈ ಸುದ್ದಿ ಇಡೀ ದೇಶಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ವಿದ್ಯಾರ್ಥಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಪಂಜಾಬ್ನ ಬರ್ನಾಲಾ ಮೂಲದ ವಿದ್ಯಾರ್ಥಿ ಇಂದು ಸಾವನ್ನಪ್ಪಿದ್ದಾನೆ. ಉಕ್ರೇನ್ ನೆಲದಲ್ಲಿ ಸಾವನ್ನಪ್ಪಿದ ಎರಡನೇ ಭಾರತೀಯ ಈತನಾಗಿದ್ದಾನೆ
ಚಂದನ್ ಜಿಂದಾಲ್ (22) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಜಿಂದಾಲ್ ಅವರು ಇಸ್ಕೆಮಿಕ್ ಸ್ಟ್ರೋಕ್‌ನಿಂದ ಬಳಲುತ್ತಿದ್ದರು ಅವರನ್ನು ಕೈವ್ಸ್ಕಾ ಸ್ಟ್ರೀಟ್ 68 ತುರ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅವರು ಕೊನೆಯುಸೆರೆಳೆದಿದ್ದಾರೆ.
ಮಗ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಕಣ್ಣೀರ ಕಡಲಲ್ಲಿ ಮುಳುಗಿದ್ದು, ಮಗನ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರುವ ಯತ್ನಕ್ಕೆ ಮುಂದಾಗಿದ್ದಾರೆ. ಅವರ ತಂದೆ ಕೂಡ ಆಸ್ಪತ್ರೆಯಲ್ಲಿ ಮಗನ ಜೊತೆ ಇದ್ದರು ಈಗ ಅವರ ಮಗನ ಮೃತ ದೇಹದೊಂದಿಗೆ ರೊಮೇನಿಯಾದ ಸಿರೆಟ್ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ನಿನ್ನೆ ರಷ್ಯಾ ದಾಳಿಯಿಂದ ಸಾವನ್ನಪ್ಪಿದ ನವೀನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಿಸಲು ಸರ್ಕಾರ ಎಲ್ಲ ಪ್ರಯತ್ನ ನಡೆಸಿದೆ. ಇನ್ನು ಈ ಸಂಬಂಧ ಇಂದು ಮಾತನಾಡಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಅವರು ಹಾಕಿಕೊಂಡಿರುವ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್ ದಾಳಿ ನಿಂತ ಮೇಲೆ ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳವು ಅವು. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
ಖಾರ್ಕಿವ್‌ನಲ್ಲಿ ಸಾವನ್ನಪ್ಪಿದ ನವೀನ್ ಗ್ಯಾನಗೌಡರ್ ಅವರ ಸಾವಿನ ಬಗ್ಗೆ ತನಿಖೆ ನಡೆಸಲಿದೆ ಎಂದು ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ನವೀನ್ ಸಾವಿಗೆ ಹಾಗೂ ಭಾರತ ದೇಶಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ ಪೂರ್ವ ಉಕ್ರೇನ್ ನಗರದ ಮೇಲೆ ತೀವ್ರವಾದ ಶೆಲ್ ದಾಳಿಯ ಸಮಯದಲ್ಲಿ ಅವರು ಆಹಾರಕ್ಕಾಗಿ ಹೊರಗೆ ಹೋದಾಗ ಶೆಲ್ ದಾಳಿಗೆ ನವೀನ್ ತುತ್ತಾಗಿದ್ದರು.
ಉಕ್ರೇನನಲ್ಲಿ ಸಂಘರ್ಷಕ್ಕೆ ಇಳಿಯಲಾಗಿದ್ದು, ಈ ವೇಳೆ ಭಾರತೀಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ರಷ್ಯಾ ಎಲ್ಲಾ ಪ್ರಯತ್ನ ನಡೆಸಲಾಗುವುದು ಈ ದುರದೃಷ್ಟ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸಲಾಗುವುದ ಎಂದಿದ್ದಾರೆ.
ಉಕ್ರೇನ್ನಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಹಿನ್ನಲೆ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ತಕ್ಷಣವೇ ಖಾರ್ಕಿವ್ ತೊರೆಯುವಂತೆ ಸೂಚನೆ ನೀಡಿದೆ. ಉಕ್ರೇನ್‌ನ ಎಲ್ಲಾ ಭಾರತೀಯ ಪ್ರಜೆಗಳು ತಮ್ಮ ಸುರಕ್ಷತೆಗಾಗಿ ತಕ್ಷಣವೇ ನಗರವನ್ನು ತೊರೆಯಬೇಕು ಎಂದು ಕೇಳಿ ಕೊಂಡಿದೆ. ಖಾರ್ಕಿವ್ನಲ್ಲಿರುವ ಭಾರತೀಯರು ನಗರ ತೊರೆದು ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾಗೆ ಆದಷ್ಟು ಬೇಗ ಅಂದರೆ ಇಂದು ಸಂಜೆ ಆರು ಗಂಟೆಯೊಳಗೆ ಹೊರಡಬೇಕು ಎಂದು ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮೂಲಕ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ