ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ಬೈಕೊಂದು ಅಕಸ್ಮಾತ್ತಾಗಿ ನೀರಿಗೆ ಬಿದ್ದ ಘಟನೆ ಇಂದು ಸಂಭವಿಸಿದೆ. ಬೈಕ್‌ನಲ್ಲಿದ್ದ ಸವಾರನಿಗೆ ಹಗ್ಗ ನೀಡಿ ನೀರಿನಿಂದ ಮೇಲಕ್ಕೆತ್ತುವ ಮೂಲಕ ಬಚಾವ್ ಮಾಡಲಾಯಿತು.
ಆದರೆ ನೀರಿಗೆ ಬಿದ್ದ ಬೈಕ್‌ನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು. ಕೊನೆಗೆ ಕ್ರೇನ್ ತರಿಸಿ ಬೈಕನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಗೆ ಮಲ್ಪೆಯ ಆಪದ್ಭಾಂಧವ ಈಶ್ವರ್ ಮಲ್ಪೆ ಮತ್ತಿತರರು ಸಹಕರಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ