Slider


ನಾನು ರಾಜಕೀಯಕ್ಕೆ ಬಂದಿದ್ದು ಪ್ರಧಾನಿಯಾಗಿದ್ದು ಆಲೂ ಮತ್ತು ಟೊಮಾಟೋದ ಬೆಲೆ ನಿಗದಿಪಡಿಸುವುದಕ್ಕಲ್ಲ:-ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ 14-3-2022

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲೀಗ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮಂಡನೆಯಾಗಲಿರುವ ಅವಿಶ್ವಾಸ ಗೊತ್ತುವಳಿಯದ್ದೇ ಚರ್ಚೆ.

ಆಡಳಿತಾರೂಢ ಪಕ್ಷದಲ್ಲೂ ಇಮ್ರಾನ್ ಖಾನ್ ವಿರುದ್ಧ ಅಸಮಾಧಾನಗಳಿರುವುದರಿಂದ ಈ ಅವಿಶ್ವಾಸ ಮತ ಯಶಸ್ವಿಯಾಗಬಹುದು ಎಂಬ ಭರವಸೆಯಲ್ಲಿದೆ ಅಲ್ಲಿನ ವಿರೋಧ ಪಕ್ಷಗಳ ಗುಂಪು.

ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಮಾತನಾಡಿರುವ ಪ್ರಧಾನಿ ಇಮ್ರಾನ್ ಖಾನ್, "ನಾನು ರಾಜಕೀಯಕ್ಕೆ ಬಂದಿದ್ದು ಮತ್ತು ಪ್ರಧಾನಿಯಾಗಿದ್ದು ಆಲೂ ಮತ್ತು ಟೊಮಾಟೋದ ಬೆಲೆ ನಿಗದಿಪಡಿಸುವುದಕ್ಕಲ್ಲ. ಈ ದೇಶದ ಯುವಕರಿಗೆ ಮಾರ್ಗ ತೋರಿಸಬೇಕೆಂಬುದು ನನ್ನ ಗುರಿ. ನನ್ನನ್ನು ಇಳಿಸಲು ಹೊರಟವರು ತಮ್ಮದೇ ಸಂಚಿನ ಭಾರಕ್ಕೆ ಹೂತುಹೋಗುತ್ತಾರೆ. 2008-18ರ ನಡುವೆ ಪಾಕಿಸ್ತಾನದ ಮೇಲೆ ಅಮೆರಿಕದ ಡ್ರೋನ್ ದಾಳಿಗಳಾಗುತ್ತಿದ್ದಾಗ ವಿಪಕ್ಷದ ನೇತಾರರೆಲ್ಲ ಮೌನ ತಾಳಿದ್ದರು" ಎನ್ನುವ ಮೂಲಕ ತಮ್ಮ ಪರ ಭಾವನಾತ್ಮಕ ಬೆಂಬಲವೊಂದನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಇಮ್ರಾನ್ ಖಾನ್.

342ಸದಸ್ಯ ಬಲದ ಅಲ್ಲಿನ ಸಂಸತ್ತಿನಲ್ಲಿ ಇವರನ್ನು ಕೆಳಗಿಳಿಸುವುದಕ್ಕೆ 272ಮತಗಳು ಬೇಕು. 2018ರಲ್ಲಿ ಚುನಾಯಿತರಾಗಿದ್ದವರು ಇಮ್ರಾನ್ ಖಾನ್. ಪಾಕಿಸ್ತಾನದ ಮುಂದಿನ ಸಾರ್ವತ್ರಿಕ ಚುನಾವಣೆ ಇರೋದು 2023ರಲ್ಲಿ
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo