Slider


ಪಡುಬಿದ್ರೆ:-ನಿಲ್ಲಿಸಿದ್ದ ಲಾರಿಗೆ ಕಾರು ಢಿಕ್ಕಿ ನಿವೃತ್ತ ಎಸ್‍ಐ ಪತ್ನಿ ಸಾವು 12-3-2022

ಪಡುಬಿದ್ರೆ:-ನಿಲ್ಲಿಸಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಸಂಚರಿಸುತಿದ್ದ ಮಹಿಳೆ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ತೆಂಕ ಎರ್ಮಾಳಿನಲ್ಲಿ ನಡೆದಿದೆ.

ಮೃತರನ್ನು ಉಡುಪಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಎಸ್‍ಐ ಶ್ರೀನಿವಾಸ್ ಎಂಬವರ ಪತ್ನಿ, ಉಡುಪಿ ಚಿಟ್ಪಾಡಿ ನಿವಾಸಿ ಭವಾನಿ (58) ಎಂದು ಗುರುತಿಸಲಾಗಿದೆ.

ಕಾರು ಚಲಾಯಿಸುತ್ತಿದ್ದ ಅವರ ಮಗ ತಾರಾನಾಥ್ (35) ಅವರಿಗೂ ಗಾಯಗಳಾಗಿವೆ.

ಊಟಕ್ಕಾಗಿ ಲಾರಿ ನಿಲ್ಲಿಸುವ ವೇಳೆ ಚಾಲಕ ನಿರ್ಲಕ್ಷ್ಯದಿಂದ ಈ ಅವಘಡವು ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಭವಾನಿ ಅವರು ಪತಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo