ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ತಾರೀಕು 15 ರ ಮಂಗಳವಾರದಂದು ನಾಗ ತನು ತರ್ಪಣ ಮಂಡಲ ಸೇವೆಯ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನೆರವೇರಲಿರುವುದು .
ತತ್ಸಂಬಂಧವಾಗಿ ಕ್ಷೇತ್ರದ ನಾಗ ದೇವರ ಸನ್ನಿಧಾನದಲ್ಲಿ ಬೆಳಿಗ್ಗೆ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ ಪವಮಾನ ಕಲಶಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಐದರಿಂದ ನಾಗ ತನು ತರ್ಪಣ ಮಂಡಲ ಸೇವೆ ಆರಂಭಗೊಳ್ಳಲಿದೆ .
ಸರ್ವ ನಾಗದೋಷ ಪರಿಹಾರ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಶ್ರೀ ಕ್ಷೇತ್ರದ ನಾಗಾಲಯದಲ್ಲಿ ಈ ಮಹಾನ್ ಸೇವೆಯು ಪ್ರಾಯಶ್ಚಿತ್ತ ಪೂರ್ವಕವಾಗಿ ಸೇವಾರ್ಥಿಯ ಪರವಾಗಿ ನೆರವೇರಲಿರುವುದು .
ಕಾರ್ಯಕ್ರಮದ ಕೊನೆಯಲ್ಲಿ ನಾಗಸಂದರ್ಶನ ಸೇವೆಯೂ ಕೂಡ ನೆರವೇರಲಿದ್ದು
ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ಅವರು ದರ್ಶನ ಸೇವೆಯನ್ನು ನಡೆಸಿಕೊಡಲಿದ್ದಾರೆ . ಶ್ರೀ ದುರ್ಗಾ ಆದಿಶಕ್ತಿ ದೇವಿಯ ಹಾಗೂ ನಾಗದೇವರ ಭೇಟಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ವಿಶೇಷ ಸಾನ್ನಿಧ್ಯದಿಂದ ಬೇಡಿ ಬಂದ ಭಕ್ತರ ಇಷ್ಟಾರ್ಥ ಕರುಣಿಸುವ ಶ್ರೀ ನಾಗಾಲಯದಲ್ಲಿ ನಾಗದೋಷದಿಂದ ವಿಮುಕ್ತಿ ಹೊಂದಿ ಕ್ಷೇಮ ಕಂಡುಕೊಂಡ ಭಕ್ತರುಗಳು ಈ ಮಹಾನ್ ಸೇವೆಯನ್ನು ನೀಡಿ ಸಂತೃಪ್ತ ರಾಗುತ್ತಿದ್ದಾರೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ