Slider


ಕುಂದಾಪುರ:-ಅಕ್ರಮ ದಾಸ್ತಾನು ಅನ್ನಭಾಗ್ಯ ಅಕ್ಕಿ ವಶಕ್ಕೆ 12-3-2022

ಕುಂದಾಪುರ : ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಇರಿಸಿದ್ದ ಸಾವಿರಾರು ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡ ಘಟನೆ ಮಾ.11ರಂದು ಬೆಳಗ್ಗೆ ತಲ್ಲೂರು ಗ್ರಾಮದ ಪಾರ್ತಿಕಟ್ಟೆಯ ಗ್ಯಾರೇಜ ಬಳಿ ನಡೆದಿದೆ.

ಖಚಿತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಎಚ್.ಎಸ್.ಸುರೇಶ ದಾಳಿ ನಡೆಸಿದ್ದು, ಈ ವೇಳೆ ಮುನಾಫ್ ಎಂಬವರ ಮನೆಯ ಅಂಗಳದಲ್ಲಿ 24 ಚೀಲಗಳಲ್ಲಿ ಸರಕಾರದ ಅನ್ನಭಾಗ್ಯ ಯೋಜನೆಯ ಕುಚ್ಚಕ್ಕಿ ತಂಬಿಸಿಟ್ಟಿರುವುದು ಕಂಡುಬಂದಿದೆ. ಇದರಲ್ಲಿ ಒಟ್ಟು 1200 ಕಿಲೋ ಅಕ್ಕಿ ಇದ್ದು, ಇದರ ಮೌಲ್ಯ 26400 ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo