ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಈ ಡ್ರೋನ್ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಹೊಸ ಪ್ರಯತ್ನದ ಬಗ್ಗೆ ಇಬ್ಬರೂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ರೀತಿಯ ತಂತ್ರಜ್ಞಾನವು ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲಿದೆ ಎಂದು ಹೇಳಿದರು. '
ಈ ವಿಚಾರವಾಗಿ ಮಾತನಾಡಿದ ಸಿಎಂ ಚೌಹಾಣ್, ಡ್ರೋನ್ ತಂತ್ರಜ್ಞಾನವು ಯುವಕರಿಗೆ ವಿಶೇಷವಾಗಿ ಕಲಿಕೆಗೆ ಹೊಸ ಮಾರ್ಗಗಳು ಮತ್ತು ಅವಕಾಶಗಳನ್ನು ತೆರೆಯುತ್ತದೆ. ರಾಜ್ಯದ ಮೊದಲ ಡ್ರೋನ್ ಶಾಲೆಯನ್ನು ಗ್ವಾಲಿಯರ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಉದ್ಯಮದಲ್ಲಿ ಡ್ರೋನ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ್ದರಿಂದ ದೊಡ್ಡ ಉದ್ಯೋಗಾವಕಾಶವಿದೆ ಎಂದು ಹೇಳಿದ್ದಾರೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ