ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ಸ್ಥಳಾಂತರಿಸುವ ಕಾರ್ಯಾಚರಣೆ ‘ಆಪರೇಷನ್ ಗಂಗಾ’ ಮಾರ್ಚ್ 10ರ ನಾಳೆಗೆ ಕೊನೆಗೊಳ್ಳಲಿದೆ.
ನಾಳೆ ಸಂಜೆಯ ವೇಳೆಗೆ ಕೊನೆಯ ವಿಮಾನವು ಉಕ್ರೇನ್ ಗಡಿಯಿಂದ ಟೇಕ್ ಆಫ್ ಆಗಲಿದ್ದು, ಈ ಮೂಲಕ ಆಪರೇಷನ್ ಗಂಗಾ ಕಾರ್ಯಾಚರಣೆ ಮುಕ್ತಾಯದ ಹಂತಕ್ಕೆ ತಲುಪಲಿದೆ.
ರಷ್ಯಾದ ಗಡಿಯ ಸಮೀಪವಿರುವ ಸುಮಿಯಲ್ಲಿ ಸಿಲುಕಿರುವ ಸುಮಾರು 700 ವಿದ್ಯಾರ್ಥಿಗಳು ರೈಲಿನ ಮೂಲಕ ಪಶ್ಚಿಮ ಉಕ್ರೇನ್‌ಗೆ ತೆರಳಿದ್ದು, ಅಲ್ಲಿಂದ ಅವರು ವಿಮಾನ ಏರಲಿದ್ದಾರೆ.
ರಷ್ಯಾ ಉಕ್ರೇನ್ ಮೇನಡುವಿನ ಭೀಕರ ಕದನದ ಸಮಯದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಫೆಬ್ರವರಿ ಅಂತ್ಯದಿಂದ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಆರಂಭಿಸಿತ್ತು. ಇಲ್ಲಿಯವರೆಗೆ ಆಪರೇಷನ್ ಗಂಗಾ ಯೋಜನೆಯಡಿ ಉಕ್ರೇನ್ ನಲ್ಲಿ ಸಿಲುಕಿದ್ದ 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ರಕ್ಷಣೆ ಮಾಡಿ, ತಾಯ್ನಾಡಿಗೆ ಕರೆತರಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ