ಸರಕಾರಿ. ಹಿರಿಯ. ಪ್ರಾಥಮಿಕ. ಶಾಲೆ. ಹಂಗಾರಟ್ಟೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಇದರ ವಿಸ್ಮಯ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ಮಾತನಾಡಿ ಆಗಿನ ಕಾಲದಲ್ಲಿ ನೊಬೆಲ್ ಪ್ರಶಸ್ತಿ ಮೂಲಕ ವಿಶ್ವಮನ್ನಣೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು.
ವಿಜ್ಞಾನ ಅಂದರೇ ಸತ್ಯದ ಅನ್ವೇಷಣೆ, ಈ ಮೂಲಕ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿಜ್ಞಾನದ ಕಡೆ ಮುಖಮಾಡಬೇಕಿದೆ. ತನ್ನಲ್ಲಿರುವ ಜ್ಞಾನದ ಸುಧೆ ಹರಿಸಿ ಹೊಸ ಹೊಸ ಆವಿಷ್ಕಾರಕ್ಕೆ ಮುಂದಡಿ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಇತ್ತರಲ್ಲದೆ ಇಂದು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರೆದಿದೆ ಎಲ್ಲಾ ಕ್ಷೇತ್ರದಲ್ಲೂ ವಿಜ್ಞಾನ ಪರಿಚಯಿಸಿಗೊಂಡಿದೆ ಈ ದಿಸೆಯಲ್ಲಿ ಅಭಿವೃದ್ಧಿ ಪೂರಕವಾಗುವ ಆವಿಷ್ಕಾರಗಳ ಬಗ್ಗೆ ಗಮನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಛೇರಿ ಉಡುಪಿ ಇದರ ಡಿ.ವೈ.ಪಿ.ಸಿ ಚಂದ್ರ ನಾಯ್ಕ ಸಿ ವಿ ರಾಮನ್ ರೇಖಾಚಿತ್ರವನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಡೆನಿಸ್ ಡಿಸೋಜ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಜ್ಞಾನ ಮಾದರಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಮನ್ವಿತ್ ಇವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡಾ.ಕೆ.ಶಿವರಾಮ ಕಾರಂತ ಹಾಗೂ ಗೋಪಾಲ ನಾಯ್ಕ ಹೆಸರಿನಲ್ಲಿ ದತ್ತಿನಿಧಿ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಡುಪಿ ಡಯೇಟ್ ಉಪನ್ಯಾಸಕಿ ಶೋಭಾ, ಬ್ರಹ್ಮಾವರ ಕ್ಷೇತ ಸಮನ್ವಯ ಅಧಿಕಾರಿ ಅರ್ಚನ, ಬ್ರಹ್ಮಾವರ ವಲಯ ಪ್ರಾಥಮಿಕ ಶಿಕ್ಷಕರ ಸಂಘ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಅಗಸ್ಯ ಫೌಂಡೇಶನ್ ಕಿರಣ್ ಕುಮಾರ್ , ಶಾಲಾ ಎಸ್.ಡಿ.ಎಮ್‌ಸಿ ಉಪಾಧ್ಯಕ್ಷೆ ಮೊಹಂತಿ ಶಾಲಾ ಹಳೇ ವಿದ್ಯಾರ್ಥಿ ಪರೀಕ್ಷಿತ್, ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಸೇಸು ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ವೀಣಾ ಪ್ರಾಸ್ತಾವನ ನುಡಿಗಳನ್ನಾಡಿದರು.
ಶಿಕ್ಷಕಿ ಉಷಾರಾಣಿ ಧನ್ಯವಾದಗೈದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಷ್ಣವಿ, ಪ್ರಜ್ಞಾ ನಿರೂಪಿಸಿದರು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ