ಹಿಜಾಬ್ ವಿವಾದ ಕುರಿತು ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಭಾರತವನ್ನು ಹಿಂದೂ ರಾಷ್ಟ್ರ ಎಂದೇ ಕರೆಯುತ್ತಾರೆ. ಇದನ್ನು ತಾಲಿಬಾನ್, ಅಪ್ಘಾನಿಸ್ತಾನ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವ ವಿವಾದದ ಹಿಂದೆ ವಿವಾದ ಸೃಷ್ಟಿಸುವ ಷಡ್ಯಂತ್ರ ಅಡಗಿದೆ. ರಾಜ್ಯದಲ್ಲಿಅರಾಜಕತೆ ಸೃಷ್ಟಿ ಮಾಡಬೇಕೆಂಬ ಟೂಲ್ ಕಿಟ್‌ನ ಭಾಗ ಇದಾಗಿದೆ ಎಂದು ದ.ಕ. ಜಿಲ್ಲಾಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆರೋಪಿಸಿದರು.
ಶಾಲೆಗೆ ಶುಲ್ಕ ಕಟ್ಟಲು ತಯಾರಿಲ್ಲದ ಸಮುದಾಯಕ್ಕೆ ಈಗ ಕೋರ್ಟ್‌ಗೆ ಹೋಗಲು ದುಡ್ಡು ಎಲ್ಲಿಂದ? ಶಾಲೆ ಕಟ್ಟಡ ನಿರ್ಮಾಣಕ್ಕೆ ಶುಲ್ಕ ಕೊಡಿ ಎಂದರೆ ಕೊಡಲು ಆಗುವುದಿಲ್ಲ. ಕೋರ್ಟಿಗೆ ಹೋಗುತ್ತಾರೆ. 50ರಿಂದ 60 ಸಾವಿರ ಜನ ಟ್ವೀಟ್ ಮಾಡುತ್ತಾರೆಂದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟ ಎಂದು ಪ್ರಶ್ನೆಗೆ ಉತ್ತರವಾಗಿ ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ