Slider

ಕುಂದಾಪುರ:-ಕೇಸರಿ ಶಾಲು ಧರಿಸಿ ಬಂದ ಮತ್ತೊಂದು ಶಾಲೆಯ ವಿದ್ಯಾರ್ಥಿಗಳು 7-2-2022

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಎದ್ದಿರುವಂತ ಹಿಜಾಬ್ ವರ್ಸಸ್, ಕೇಸರಿ ಶಾಲು ವಿವಾದ ಈಗ ಮತ್ತೆ ಮುಂದುವರೆದಿದೆ. ರಾಜ್ಯ ಸರ್ಕಾರ ಈ ವಿವಾದಕ್ಕೆ ಬ್ರೇಕ್ ಹಾಕೋದಕ್ಕೆ ಸಮವಸ್ತ್ರ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸಿದ ನಂತ್ರವೂ ಇಂದು ಮತ್ತೊಂದು ಶಾಲೆಯ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಇಂದು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದಂತ ಪ್ರಾಂಶುಪಾಲರು, ಕೇಸರಿ ಶಾಲು ಧರಿಸಿ ಬಂದ್ರೇ ತರಗತಿಗೆ ತೆರಳೋದಕ್ಕೆ ಅನುಮತಿ ನೀಡೋದಿಲ್ಲ ಅಂತ ಹೇಳಿದ್ದಾರೆ.

ಕೆಲ ಕಾಲ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರು, ಉಪನ್ಯಾಸಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದ್ದು. ಈ ಬಳಿಕ ಮನವೊಲಿಸಲು ಯಶಸ್ವಿಯಾದಂತ ಕಾಲೇಜು ಆಡಳಿತ ಮಂಡಳಿಯು, ಕೇಸರಿ ಶಾಲು ತೆಗೆದ ನಂತ್ರ ತರಗತಿಗೆ ಅವಕಾಶ ಮಾಡಿ ಕೊಟ್ಟಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿದ ನಂತ್ರವೂ ಕೇಸರಿ ವಿವಾದ ಮುಂದುವರೆದಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo