ಕೇಂದ್ರ ನ್ಯಾಯಾಂಗ ಸಚಿವ ಕಿರಣ್ ರಿಜುಜು ಲೋಕಸಭೆಗೆ ಈ ವಿಷಯವನ್ನ ಸ್ಪಷ್ಟಪಡಿಸಿದ್ದು, ಆಧಾರ್ ಕಾರ್ಡ್ ಪೌರತ್ವದ ಮಾನ್ಯತೆಯಾಗಿದೆ.ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಪೌರತ್ವವಿದ್ದಂತಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಕ್ರಮವಾಗಿ ವಲಸೆ ಬಂದವರು, ಅಕ್ರಮ ಮಾರ್ಗಗಳ ಮೂಲಕ ಆಧಾರ್ ಕಾರ್ಡ್ ಪಡೆಯುವುದು ಮತ್ತು ಭಾರತೀಯ ಪ್ರಜೆಯಾಗಿ ಶಾರ್ಟ್‌ಕಟ್‌ಗಳನ್ನ ಆಯ್ಕೆ ಮಾಡುವುದು ಅಪರಾಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಧಾರ್ ವಿಚಾರದಲ್ಲಿ ಕೇಂದ್ರ ಇತ್ತೀಚೆಗೆ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದೆ. ಮತದಾರರ ಚೀಟಿಗೂ ಲಿಂಕ್ ಮಾಡಿ ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಮತದಾರರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಮತದಾರರ ಕಾರ್ಡ್ ಸಂಖ್ಯೆಯನ್ನ ಲಿಂಕ್ ಮಾಡಬೇಕು. ಆದರೆ, ಇದು ಸ್ವಯಂಪ್ರೇರಿತ ಎಂದು ಕೇಂದ್ರ ಹೇಳಿದೆ. ಭಾರತದಲ್ಲಿ ಇಂದಿಗೂ ಆಧಾರ್ ಪ್ರಮುಖ ಸಂಖ್ಯೆಯಾಗಿದೆ. ಇದು ವ್ಯಾಪಕವಾಗಿ ಮಾನ್ಯವಾದ ಗುರುತಿನ ಚೀಟಿಯಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ