ಉಡುಪಿಯಲ್ಲಿ ಸಿದ್ದರಾಮಯ್ಯ ಅವರ ನಡೆ ವಿರುದ್ಧ ಕಿಡಿಕಾರಿದ ಅವರು ನಾನು ಅವರದ್ದೇ ದಾಟಿಯಲ್ಲಿ ಮಾತನಾಡಬಹುದು, ನಾನು ಆ ರೀತಿ ಮಾತನಾಡಿದ್ರೆ ಶೋಭೆ ತರಲ್ಲ ಎಂದು ಕಿಡಿಕಾರಿದ್ಧಾರೆ.
ಇದೇ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ಸಮಯದಲ್ಲಿ ವಸ್ತ್ರಸಂಹಿತೆಯಿತ್ತು. ಜಿಲ್ಲೆಯ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇತ್ತು. ತರಗತಿಯಲ್ಲಿ ಹಿಜಾಬ್ ಧರಿಸದೆ ಪಾಠ ಕೇಳುತ್ತಿದ್ರು. 2021 ಡಿಸೆಂಬರ್ ತಿಂಗಳಿನಿಂದ ಹಿಜಾಬ್ ತಕರಾರು ಶುರು ವಾಗಿದೆ ಎಂದಿದ್ದಾರೆ..
ರಘುಪತಿ ಭಟ್ ಯಾರು ಅನ್ನೋದನ್ನ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರನ್ನ ಕೇಳಲಿ. ಮೂರು ಬಾರಿ ಅವರ ಪಕ್ಷದ ಅಭ್ಯರ್ಥಿಯ ಎದುರು ಗೆದ್ದಿದ್ದೇನೆ. ಸಿದ್ದರಾಮಯ್ಯ ಅವರಿಗೆ ನಾನು ಯಾರಂತ ಗೊತ್ತಿಲ್ಲದೆ ಇರಬಹುದು. ಆದ್ರೆ ಮೂರು ಬಾರಿ ಗೆಲ್ಲಿಸಿದ ಮತದಾರರಿಗೆ ಗೊತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸಂವಿಧಾನ ಬದ್ದವಾಗಿ ನಾನು ಚುನಾಯಿತ ಪ್ರತಿನಿಧಿ. ಶಾಸಕನಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ. ಅಧ್ಯಕ್ಷ ನೆಲೆಯಲ್ಲಿ ಕೆಲವು ಪ್ರಯತ್ನ ಮಾಡಿದ್ದೇನೆ. ಸಿದ್ದರಾಮಯ್ಯ ಕಾಲದಲ್ಲಿ ಇದ್ದ ಪದ್ದತಿಯನ್ನ ಮುಂದುವರೆಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನ ಸಿದ್ದರಾಮಯ್ಯ ಅರಿತು ಮಾತನಾಡಬೇಕು ಎಂದಿದ್ದಾರೆ..
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ