ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ವಿದ್ಯಾರ್ಥಿನಿ, ಹಿಜಾಬ್ ನಮ್ಮ ಜೀವನದ ಭಾಗ. ನಮ್ಮ ಹಿರಿಯರು ಹಿಜಾಬ್ ಧರಿಸುತ್ತಿದ್ದರು. ನನ್ನತ್ತೆ ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅಚಾನಕ್ಕಾಗಿ ಈ ರೂಲ್ಸ್ ಯಾಕೆ ಬಂತು. ನಾವು ಹಿಜಾಬ್ ಹಾಕಿದರೆ ಯಾರಿಗೆ ಏನು ತೊಂದರೆ ಇದೆ. ನಮ್ಮ ಪ್ರಶ್ನೆಗೆ ಉತ್ತರವೇ ಇಲ್ಲ. ಪ್ರಾಂಶುಪಾಲರು ಸರ್ಕಾರದ ಸೂಚನೆ ಎನ್ನುತ್ತಾರೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ? ನಿನ್ನೆಯಿಂದ ಗೇಟಿನ ಒಳಗೆ ನಮ್ಮನ್ನು ಬಿಡುತ್ತಿಲ್ಲ. ನಮಗೆ ಯಾರು ಸಪೋರ್ಟ್ ಮಾಡುತ್ತಿಲ್ಲ. ಹಿಜಾಬ್‌ಗೆ ಅವಕಾಶ ಬೇಕು. ಶಿಕ್ಷಣ ನಮಗೆ ಇಂಪಾರ್ಟೆಂಟ್ ಎಂದು ಅವಲತ್ತುಕೊಂಡಿದ್ದಾಳೆ.
ಕುಂದಾಪುರದಲ್ಲಿ ಹಿಜಾಬ್ ಜೋರಾಗುತ್ತಿದ್ದಂತೆಯೇ ಉಡುಪಿ ಜಿಲ್ಲೆಯ ಬೇರೆ ಕಾಲೇಜುಗಳಿಗೂ ಈ ಪ್ರತಿಭಟನೆ ವ್ಯಾಪಿಸಿದೆ. ಬೈಂದೂರಿನ ಸರ್ಕಾರಿ ಪಿಯು ಕಾಲೇಜು, ಬಸ್ರೂರಿನ ಶಾರದಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ಮುಂದೆ ಕಾಲೇಜಿನಲ್ಲಿ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ ಪಂಚೆ, ರುದ್ರಾಕ್ಷಿ ಮಾಲೆ ಧರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಸುಪ್ರಸಾದ್, ಹಿಜಾಬ್ ವಿರುದ್ಧ ಕೇಸರಿ ಶುರುವಾಗಲು ಮೂಲ ಕಾರಣ ಆರು ವಿದ್ಯಾರ್ಥಿನಿಯರು. ಕಾಲೇಜಿನಲ್ಲಿ ಶರ್ಟ್, ಪ್ಯಾಂಟ್, ಐಡಿ ಕಾರ್ಡ್ ಅಷ್ಟೇ ಇರಬೇಕು, ಇದೇ ಸಮಾನತೆ. ಹಿಜಾಬ್ ಈಸ್ ಮೈ ರೈಟ್ ಅಂತ ಘೋಷಣೆ ಕೂಗುತ್ತಾರೆ. ನಾವು ಜೈ ಶ್ರೀರಾಮ್ ಹೇಳಿ ಕೂಗುತ್ತೇವೆ ಎಂದರು.
ಹಿಜಾಬ್ ಧರಿಸುವ ಕುರಿತು ವಿದ್ಯಾರ್ಥಿನಿಯರ ಹಿಂದೆ ಸಂಘಟನೆ ಇರಬಹುದು. ನಮ್ಮ ಹಿಂದೆ ಹಿಂದೂ ಸಂಘಟನೆ ಇದೆ. ನಾವು ಕೂಡ ಸಂಘಟನೆ ಮೂಲಕ ಹೋರಾಡುತ್ತೇವೆ. ನ್ಯಾಯಾಲಯದಿಂದ ಏನು ತೀರ್ಪು ಬರುತ್ತದೋ ಗೊತ್ತಿಲ್ಲ. ತೀರ್ಪು ಹಿಜಾಬ್ ಪರ ಬಂದಲ್ಲಿ ನಾವು ಸರಿಯಾದ ಉತ್ತರ ಕೊಡುತ್ತೇವೆ. ಕುಂದಾಪುರ ಕಾಲೇಜುಗಳಲ್ಲಿ ಸಾವಿರದಲ್ಲಿ ಐದು ಶೇಕಡಾ ಅಷ್ಟೇ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ನಾವು ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಉಡುಪಿಯ ಹಲವು ಜ್ಞಾನದೇಗುಲಗಳು ಧರ್ಮ ಸಂಘರ್ಷದ ವೇದಿಕೆಯಾಗಿವೆ. ಈ ವಿವಾದ ಭುಗಿಲೆದ್ದು ಎರಡು ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ