ಶ್ರಾವ್ಯ(22) ಮೃತ ಯುವತಿ. ಈಕೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಯಾಗಿದ್ದಾಳೆ. ಟೂತ್ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಿದ್ದಾಳೆ
ಮನೆಯ ಬಾತ್ ರೂಂನ ಕಿಟಕಿ ಬಳಿಯಲ್ಲಿ ಇಲಿ ಪಾಷಾಣ ಹಾಗೂ ಟೂತ್ ಪೇಸ್ಟ್‌ನ್ನು ಒಟ್ಟಿಗೆ ಇಡಲಾಗಿತ್ತು. ಕತ್ತಲಿದ್ದರಿಂದ ಇಲಿ ಪಾಷಾಣ ಕೈಗೆತ್ತಿಕೊಂಡಿದ್ದ ಯುವತಿ ಹಲ್ಲುಜ್ಜಿದ್ದಾಳೆ. ಇಲಿ ಪಾಷಾಣ ಎಂದು ತಡವಾಗಿ ಯುವತಿಗೆ ಗೊತ್ತಾಗಿದೆ. ನಂತರ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ