ಕಠಿಣ ಶಿಕ್ಷೆ ಬೇಡ ತರಗತಿಯಲ್ಲಿ ಹಿಜಬ್ ಬೇಕು ಎಂದರೆ ಅದು ಆಗೂದಿಲ್ಲ. ಭಾರತ ದೇಶದ ಗಾಳಿ ನೀರು ಅನ್ನ ತಿನ್ನುತ್ತಿದ್ದೀರಿ. ದುಬೈ ಸೌದಿಗಳಲ್ಲಿ ಷರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ. ಹಿಂದೂಗಳ ಕೆಲ ಪದ್ಧತಿ ಕಾಲ-ಕಾಲಕ್ಕೆ ಬದಲಾವಣೆಯಾಗಿದೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದುಹಾಕಿದ್ದಾರೆ. ಷರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲೀಮರಿಗೆ ಕಡ್ಡಾಯ ಮಾಡಿ ಎಂದು ಮನವಿ ಮಾಡಿದರು.
ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲಿಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಂನಲ್ಲಿ ಹಿಜಬ್ ಬೇಕು ಎನ್ನುವವರಿಗೆ ಷರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ