Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಹಿಜಾಬ್‌ಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿ ಶಿಫಾ ತಂದೆ ಮತ್ತು ಅಣ್ಣನಿಗೆ ಹಲ್ಲೆ22-2-2022

ಉಡುಪಿ: ಜಿಲ್ಲೆಯ ಕಾಲೇಜೊಂದರ ಹಿಜಾಬ್ ವಿವಾದ ತಾರಕಕ್ಕೇರಿದ್ದು ಈದೀಗ ಹಿಜಾಬ್ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರಿರುವ ಶಿಫಾ ಎಂಬ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿ, ಅಣ್ಣ ಸೈಫ್‌ಗೆ ಹಲ್ಲೆ ಮಾಡಿದ ಘಟನೆ ಉಡುಪಿಯ ಮಲ್ಪೆಯಲ್ಲಿ ಸೋಮವಾರ ತಡರಾತ್ರಿ ನಡೆದು ಬಂದಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಕ್ರಂ ಅಸೀಲ್ ಹೋಟೆಲ್ ಮುಚ್ಚುವ ವೇಳೆ ನೂರಕ್ಕಿಂತ ಹೆಚ್ಚು ಜನ ಏಕಕಾಲದಲ್ಲಿ ಹೋಟೆಲ್ ಹಾಗೂ ಶಿಫಾ ಅಣ್ಣನ ಮೇಲೆ ದೌರ್ಜನ್ಯ ಮಾಡಿದ್ದಾರೆ. 

ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿಗಳ ಮಾಹಿತಿ ಸೋರಿಕೆ ಆಗುತ್ತಿರುವುದು. ಹೋಟೆಲ್ ಮುಚ್ಚುವ ವೇಳೆ ನೂರಕ್ಕಿಂತ ಹೆಚ್ಚು ಮಂದಿ ಬಂದು ಧಮಕಿ ಹಾಕಿ, 4-6 ಮಂದಿ ಸೈಫ್‌ಗೆ ಹೊಡೆದು ಹೋಟೆಲ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

 ಈ ವೇಳೆ ಸೈಫ್‌ನ ಸ್ನೇಹಿತರು ದಾಳಿ ಮಾಡಿದವರನ್ನು ಅಲ್ಲಿಂದ ಕಳುಹಿಸಿದ್ದಾರೆ. ದಾಳಿಯ ಹಿಂದೆ ಶಾಸಕ ರಘುಪತಿ ಭಟ್ ಅವರ ಕೈವಾಡಿವಿದೆ ಎಂಬ ಸಂಶಯವಿದೆ. ದಾಳಿ ಮಾಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ಕ್ಯಾಂಪಸ್ ಫ್ರಂಟ್‌ನ ಆಗ್ರಹ. ಇಲ್ಲವಾದಲ್ಲಿ ಕ್ಯಾಂಪಸ್ ಫ್ರಂಟ್ ವತಿಯಿಂದ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ ಎಂದರು.
1

Mega Menu

blogger
© all rights reserved
made with by templateszoo