ಬಾರ್ಕೂರು : ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ರಾಷ್ಟ್ರೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರಿನಲ್ಲಿ ಪ್ರಥಮ ವರ್ಷದ ಎಂ.ಕಾಮ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಾಣಿಜ್ಯ ವಿಭಾಗದ ಹಿರಿಯ ಸಹಪ್ರಾಧ್ಯಪಕರಾದ ಶ್ರೀ ಮಹಬಲೇಶ ಶರ್ಮಾರವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಆಚಾರ್ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಅನ್ನಪೂರ್ಣ ( ಹೆಚ್.ಒ. ಡಿ ಆಫ್ ಕಾಮರ್ಸ್ ಡಿಪಾರ್ಟ್ಮೆಂಟ್), ಕಾರ್ತಿಕ್ ಪೈ ( ಹೆಚ್. ಒ.ಡಿ ಆಫ್ ಯು.ಜಿ.ಡಿಪಾರ್ಟ್ಮೆಂಟ್), ಪುರುಷೋತ್ತಮ್ ( ಕೋ ಒರ್ಡಿನೇಟರ್ ಆಫ್ ಪಿ.ಜಿ.ಫೋರಂ ), ಶ್ರುತಿ ಆಚಾರ್ಯ (ಕೋ ಒರ್ಡಿನೇಟರ್ ಆಫ್ ಯು.ಜಿ.ಫೋರಂ ) ಹಾಗೂ ರಾಧಾಕೃಷ್ಣ, ಉಪನ್ಯಾಸಕರಾದ ಯೋಗಿಶ್, ಆದರ್ಶ್, ಆಶಿಶ್, ಅಕ್ಷತಾ, ಪೃಥ್ವಿ, ಗುಣಪ್ರಿಯ ಉಪಸ್ಥಿತರಿದ್ದರು.
ಕಾರ್ಯಕ್ರಮವು ದೀಪ ಪ್ರಜ್ವಲಿಸುವುದರ ಮೂಲಕ ಆರಂಭಗೊಂಡಿತು. ಕಾರ್ಯಕ್ರಮದ ನಿರೂಪಣೆಯನ್ನು ದ್ವೀತಿಯ ವರ್ಷದ ವಿದ್ಯಾರ್ಥಿನಿಯಾದ ಅಕ್ಷತಾ ರವರು ನಿರೂಪಿಸಿ, ಸುನೀತಾರವರು ಸ್ವಾಗತಿಸಿ ಅಕ್ಷತಾರವರು ವಂದಿಸಿದರು.
ನಂತರ ಅಪರಾಹ್ನದ ಕಾರ್ಯಕ್ರಮವು 1:30 ಗೆ ಆರಂಭಗೊಂಡು ದ್ವೀತಿಯ ವರ್ಷದ ವಿದ್ಯಾರ್ಥಿನಿಯಾದ ಸ್ಪಂದನ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಮನೋರಂಜನೆಗಾಗಿ ದ್ವಿತೀಯ ವರ್ಷದ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರ ಜೊತೆಯಲ್ಲಿ ವಿವಿಧ ಆಟಗಳನ್ನು
ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಏರ್ಪಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಯಿತು.
ಇನ್ನು ಕಾರ್ಯಕ್ರಮದ ಕೊನೆಯ ಹಂತವಾಗಿ ಕಾಲೇಜಿನ ಆಸುಪಾಸಿನಲ್ಲಿ ಗಿಡ ನೆಡುವುದರ ಮೂಲಕ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು.
ಇವರ ಈ ಒಂದು ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿದ್ದು ಉಪನ್ಯಾಸಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ