ಕಾಲೇಜಿನ ಕನ್ನಡ ಭಾಷ ವಿಭಾಗದಿಂದ ದ.ರಾ.ಬೇಂದ್ರೆಯವರ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗಣನಾಥ ಶೆಟ್ಟಿ ಎಕ್ಕಾರುವರು ವಹಿಸಿದರು. ಕಾರ್ಯಕ್ರಮದ ಕುರಿತು ಕನ್ನಡ ವಿಭಾಗದ ಮುಖ್ಯಸ್ಥರಾದ ಜಯಪ್ರಕಾಶ್ ಶೆಟ್ಟಿ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಐ.ಕ್ಯು.ಎ.ಸಿಯ ಸಂಚಾಲಕರಾದ ಸುರೇಶ್ ರೈ.ಕೆ , ಸಹ ಪ್ರಾಧ್ಯಾಪಕರಾದ ರಾಧಾಕೃಷ್ಣ,
ಸಹ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ರತ್ನಮಾಲಾ, ಉಪನ್ಯಾಸಕಿಯರಾದ ಶ್ರೀಮತಿ ಅರ್ಚನಾ ಮತ್ತು ಶಾಲಿನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕುರಿತು "ಬೇಂದ್ರೆಯವರ ಬದುಕೇ ಒಂದು ಮಹಾಕಾವ್ಯ" ಎಂಬಂತೆ ಅವರು ಸಾಹಿತ್ಯದ ದೃಷ್ಟಿಕೋನ, ಬದುಕಿನ ಚಿತ್ರಣವನ್ನು ಎಲ್ಲರಿಗೂ ಮಾದರಿಯಾಗಿದೆ. 'ಒಲವೆ ನಮ್ಮ ಬದುಕು' ಎಂಬಂತೆ, ಬೇಂದ್ರೆಯವರ ಬದುಕು ಯಾವಾಗಲೂ ಸ್ವಾಭಿಮಾನದ ಪ್ರತೀಕವಾಗಿದೆ ಎಂದು
ಸಹಾಯಕ ಪ್ರಾಧ್ಯಾಪಕರಾದ ಡಾ|ವೆಂಕಟೇಶ್ವರ ಹೆಚ್.ಕೆ ಯವರು ಹೇಳಿದರು.
ನಂತರ ಧನ್ಯರವರು ದ.ರಾ ಬೇಂದ್ರೆಯವರ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನವನ್ನು ದಿಶಾ , ದ್ವೀತಿಯ ಬಹುಮಾನವನ್ನು ರಿಯಾಜ್, ತೃತೀಯ ಬಹುಮಾನವನ್ನು ಸುಶ್ಮಿತಾರವರು ಪಡೆದುಕೊಂಡು ಸಂಭ್ರಮ ಪಟ್ಟರು.
ಈ ವೇಳೆ ಕಾರ್ಯಕ್ರಮವನ್ನು ನಿಕೇಶ್ ರವರು ನಿರೂಪಿಸಿದರೆ, ಶ್ರುತಿ ಯವರು ಸ್ವಾಗತಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ