ಸ್ಕೂಟಿ ಕಳ್ಳತನ ಮಾಡಿರುವ ವ್ಯಕ್ತಿಯನ್ನು ಸಾಲಿಗ್ರಾಮ ಸಾಸ್ತಾನ ವ್ಯಾಪ್ತಿಯ ಯುವಕ ಎಂದು ತಿಳಿದುಬಂದಿದೆ. ಇನ್ನು KA. 20. EV. 6577 ಎಂಬ ನಂಬರ್ ಉಳ್ಳ ಸ್ಕೂಟಿಯನ್ನು ಕಳವು ಮಾಡಿದ್ದಾನೆ.
ಬೈಕ್ ಮಾಲೀಕರು ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಬಳಿ ಹೋಂಡಾ ಡಿಯೋ ಸ್ಕೂಟಿಯನ್ನು ನಿಲ್ಲಿಸಿ ಕರ್ಮಷಿಯಲ್ ಪಾರ್ಸೆಲ್ ಕೊಡಲು ತೆರಳಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಕಳ್ಳನೋರ್ವ ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟಿಯನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.
ಇನ್ನು ಆತ ಸ್ಕೂಟಿಯನ್ನು ಕಳವು ಮಾಡುತ್ತಿರುವ ದೃಶ್ಯ ಸದ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ