ಕೆ.ಜಿ.ಎಫ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಕೆ.ಜಿ.ಎಫ್ ಸಿನೆಮಾ ಸಂಗೀತಕ್ಕೆ ಫೈನಲ್ ಟಚ್ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರವಿ ಬಸ್ರೂರ್ ಅವರ ಹುಟ್ಟೂರಾದ ಕುಂದಾಪುರ ತಾಲೂಕಿನ ಬಸ್ರೂರ್ ಗೆ ಆಗಮಿಸಿರುವ ಕನ್ನಡ ಸ್ಯಾಂಡಲ್ ವುಡ್ ನ ನಟ ಯಶ್ ತಮ್ಮ ಬಿಡುವಿನ ವೇಳೆ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಕಾಲ ಕಳೆದಿದ್ದಾರೆ.
ಅದಲ್ಲದೆ ಇಂದು ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ನಟ ಯಶ್ ದೇವರ ದರ್ಶನ ಪಡೆದರು. ಈ ಸಮಯದಲ್ಲಿ ನಟ ಯಶ್ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ