ವಿದೇಶಗಳಿಂದ, ಹೈದರಾಬಾದ್ ನಿಂದ ಇಂಟರ್ ನೆಟ್ ಕಾಲ್ ಮೂಲಕ ಶಾಸಕ ರಘುಪತಿ ಭಟ್ ಅವರಿಗೆ ಬೆದರಿಕೆ ಕರೆ ಮಾಡಿದ್ದು, 'ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ, ನಿನ್ನನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದು ಗೊತ್ತಿದೆ' ಎಂದು ಕೆಲವು ನಂಬರ್ ಗಳಿಂದ ಕರೆ ಬಂದಿದ್ದು, ಈ ಬಗ್ಗೆ ರಾಜ್ಯ ಗೃಹ ಸಚಿವರಿಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗನ್ ಮ್ಯಾನ್ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ನನಗೆ ಯಾವುದೇ ಗನ್ ಮ್ಯಾನ್ ಬೇಡ ನನಗೆ ನನ್ನ ಜನಗಳೇ ಭದ್ರತೆಗೆ ಇದ್ದಾರೆ. ಇಂತಹ ಬೆದರಿಕೆ ಕರೆಗಳಿಗೆ ಜಗ್ಗುವ ವ್ಯಕ್ತಿ ನಾನಲ್ಲ ಎಂದು ರಘುಪತಿ ಭಟ್ ಹೇಳಿಕೆಯನ್ನು ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ