ಈ ಕುರಿತು ಮೌಖಿಕ ಆದೇಶ ನೀಡಿದ ಹೈಕೋರ್ಟ್ ಸಿಜೆ, ' ಮುಂದಿನ ವಿಚಾರಣೆಯನ್ನ ಸೋಮವಾರ ಮಧ್ಯಹ್ನ 2.30ರವರೆಗೆ ಮುಂದೂಡಲಾಗಿದೆ. ಈಗ ಈಗ ಮಧ್ಯಂತರ ಆದೇಶ ನೀಡಲು ಬಯಸುತ್ತೇವೆ.
ಅದ್ರಂತೆ, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ವಿಚಾರಣೆ ಮುಗಿಯುವವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಶಾಲು ಧರಿಸುವಂತಿಲ್ಲ' ಎಂದಿದ್ದಾರೆ.
'ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು' ಎಂದಿದ್ದಾರೆ. ಇನ್ನು ಶೀಘ್ರದಲ್ಲಿಯೇ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನ ಪ್ರಾರಂಭಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ