ಅವರು ಸೋಮವಾರ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಹಿಜಾಬ್ ಕುರಿತು ನಡೆದ ಅಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಮುಸ್ಲಿಂ ಮುಖಂಡರ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಹಂತದಲ್ಲಿ ನಮಗೆ ಯಾವುದೇ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ ಸರ್ಕಾರದ ಸಮಿತಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತೆ ಅದುವರೆಗೆ ಕಾಯಬೇಕು ಎಂದು ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ತಿಳಿಸಲಾಗಿದೆ. ಅಷ್ಟರವರೆಗೆ ಹಿಂದೆ ಬರುತ್ತಿದ್ದ ರೀತಿಯಲ್ಲಿ ಕಂಪೌಂಡ್ ಒಳಗೆ ತನಕ ಹಿಜಾಬ್ ಹಾಕಿಕೊಂಡು ಬಂದು ತರಗತಿಯಲ್ಲಿ ಹಿಜಾಬ್ ಇಲ್ಲದೆ ಕುಳಿತು ಪಾಠ ಕೇಳಬೇಕು ಎಂದು ಸೂಚಿಸಲಾಗಿದೆ.
ನಾಳೆಯಿಂದ ವಿದ್ಯಾರ್ಥಿನಿಯರು ಅವರ ನಿರ್ಧಾರ ಇದ್ದರೆ ಮಾತ್ರ ತರಗತಿಗೆ ಬರಬಹುದು ತರಗತಿಯಲ್ಲಿ ಹಿಜಾಬ್ ಧರಿಸದೆ ಬರುತ್ತೇವೆ ಎಂಬ ನಿರ್ಧಾರ ಮಾಡಿದ್ದರೆ ಮಾತ್ರ ಕಾಲೇಜಿಗೆ ಬನ್ನಿ ಇಲ್ಲವಾದರೆ ದಯವಿಟ್ಟು ಬರಬೇಡಿ ಇಲ್ಲಿ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬೇಡಿ ಎಂದರು.
ಪೊಲೀಸ್ ಇಲಾಖೆಗೆ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ನಾಳೆಯಿಂದ ಕಾಲೇಜು ಆವರಣದಲ್ಲಿ ಹಿಜಾಬ್ ವಿಚಾರ ಎತ್ತಿಕೊಂಡು ಬೇರೆ ಬೇರೆ ಸಂಘಟನೆಗಳು, ಮಾಧ್ಯಮದವರಿಗೆ ಕಾಲೇಜಿಗೆ ಪ್ರವೇಶ ನೀಡಕೂಡದು ಎಂದು ಸೂಚಿಸಲಾಗಿದೆ. ಈ ಕುರಿತು ಕಾಲೇಜು ಅಭಿವೃದ್ಧಿ ಸಮಿತಿ ಸ್ಪಷ್ಟ ನಿರ್ಣಯ ಕೈಗೊಂಡಿದೆ.
ಯಾರಿಗಾದರೂ ಏನೇ ಮನವಿ ಹಾಗೂ ಇನ್ನಿತರ ವಿಚಾರಗಳಿದ್ದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಲಿ ಬದಲು ಕಾಲೇಜು ಆವರಣಕ್ಕೆ ಈ ವಿಚಾರದಲ್ಲಿ ಪ್ರವೇಶ ಇಲ್ಲ. ನಾಳೆಯಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಯಾರು ಶಿಸ್ತನ್ನು ಪಾಲಿಸುತ್ತಾರೆ ಅವರು ಬರಬಹುದು ಎಂದು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ