ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನಿಂದ ಹೊನ್ನಾವರಕ್ಕೆ ಹೋಗುತಿದ್ದ ಬೈಕ್, ಕೋಟದಿಂದ ಹೈಸ್ಕೂಲ್ ಕಡೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಕೋಟ ಮೊಬೈಲ್ ಮನೆ ಅಂಗಡಿಯ ಗಿರೀಶ್ ಹಂದೆ ಎಂದು ತಿಳಿಯಲಾಗಿದೆ. ಇವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.
ಇನ್ನು ಸಣ್ಣ ಪುಟ್ಟ ಗಾಯಗೊಂಡ ಹೊನ್ನಾವರದ ಇಸ್ಮಾಯಿಲ್ ಹಾಗೂ ಶಾಹುಲ್ ಇವರನ್ನು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಸೇರಿಸಲಾಗಿದೆ.
ಆ ತಕ್ಷಣ ಗಾಯಗೊಂಡವರನ್ನು ಕೋಟ ಜೀವನ ಮಿತ್ರ ಆಂಬುಲೆನ್ಸ್ ನ ಮಾಲಿಕರಾದ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಹಾಗೂ ವಸಂತ್ ಸುವರ್ಣ ಇವರು ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸಿದರು
ಇನ್ನು ಈ ಕುರಿತು ಕೋಟ ಆರಕ್ಷಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ