ಮೃತ ಯುವಕನನ್ನು ಮೃತ್ಯುಂಜಯ 28 ಎಂದು ಗುರುತಿಸಲಾಗಿದೆ.
ಅಜೆಕಾರಿನಲ್ಲಿ ಡ್ರೈವರ್ ಕೆಲಸ ನಿರ್ವಹಿಸುತ್ತಿದ್ದ ಈತ ಕೆಲದಿನಗಳ ಹಿಂದೆ ಕೆಲಸವನ್ನು ತೊರೆದಿದ್ದ ಎನ್ನುವ ಮಾಹಿತಿ ಇದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸ್ನೇಹಿತನಿಗೆ ವಾಟ್ಸಾಪ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸ್ನೇಹಿತನಿಗೆ ತಿಳಿಸಿದ್ದ, ಈ ಹಿನ್ನೆಲೆಯಲ್ಲಿ ಸ್ನೇಹಿತ ಕರೆ ಮಾಡಿದಾಗ ಮೃತ್ಯುಂಜಯ ಕರೆ ಸ್ವೀಕರಿಸಲಿಲ್ಲ ಆಗಿ ಸ್ಥಳಕ್ಕೆ ಆಗಮಿಸಿ ನೋಡಿದಾಗ ಮೃತ್ಯುಂಜಯ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ