Slider

ಉಡುಪಿ ನಗರಸಭೆಗೆ ಕವಿ ಮುದ್ದಣ್ಣ ಜಯಂತಿಯೇ ನೆನಪಿಲ್ಲ..?

ಉಡುಪಿ : ಕವಿ ಮುದ್ದಣ ಜಯಂತಿಯು ಜನವರಿ 24 ರಂದು ಆಚರಿಸಲ್ಪಡುವುದು. ಉಡುಪಿ ಕವಿ ಮುದ್ದಣ ಮಾರ್ಗ ಇಲ್ಲಿರುವ ನಗರಾಡಳಿತ ಕಛೇರಿಯ ಸನಿಹ ಕವಿ ಮುದ್ದಣರ ಪುತ್ಥಳಿ ಇರುವುದು. 

ಹಲವಾರು ಕೃತಿಗಳನ್ನು ಅಕ್ಷರ ಸರಸ್ವತಿಯ ಮಡಿಲಿಗೆ ಸಮರ್ಪಿಸಿರುವ ಕನ್ನಡನಾಡಿನ ಮೇರುಕವಿಯಾಗಿರುವ ಕವಿ ಮುದ್ದಣರಿಗೆ ಗೌರವ ಸಲ್ಲಿಸುವ ಸಂಪ್ರದಾಯವನ್ನು ಉಡುಪಿ ನಗರಾಡಳಿತವು ಮರೆತಿರುವುದರ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

 ಇನ್ನು ಮುಂದಾದರೂ ಉಡುಪಿ ಜಿಲ್ಲೆಯ ಹಿರಿಯ ಕವಿಯನ್ನು ಸ್ಮರಿಸುವ ಕಾರ್ಯವು ನಗರಾಡಳಿತದಿಂದ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo