ಸದ್ಯ ಅವರಿಗೆ ಲಘು ರೋಗ ಲಕ್ಷಣಗಳಿರುವ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ ಅಶೋಕ್ ಇತ್ತೀಚೆಗಷ್ಟೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೆಲದಿನಗಳ ನಂತರ ಹೋಮ್ ಐಸೋಲೇಶನ್ ಗೆ ಒಳಗಾಗಲಿದ್ದಾರೆ.
ಈ ಕುರಿತು ಆರ್ ಆಶೋಕ್ ಟ್ವೀಟ್ ಮಾಡಿದ್ದು ನನಗೆ ಕೋವಿಡ್ ದೃಢಪಟ್ಟಿದ್ದು ಆರೋಗ್ಯವಾಗಿ ಇದ್ದೇನೆ, ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ