ಅವಿಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಕ್ಷಗಾನ ಮೇಳಗಳಲ್ಲಿ ವೃತ್ತಿಪರ ಕಲಾವಿದರಾಗಿ ಹಾಗೂ ನೇಪಥ್ಯ ಕೆಲಸಗಾ ರಾಗಿ ದುಡಿಯುತ್ತಿದ್ದೇವೆ. ರಾಜ್ಯದಲ್ಲಿ ವಿಧಿಸಿರುವ ಕರ್ಪ್ಯೂವಿನಿಂದ ನಮ್ಮ ಜೀವನವೇ ಅತಂತ್ರ ಸ್ಥಿತಿಯಲ್ಲಿದೆ ಎಂದು ಕಲಾವಿದರು ದೂರಿದರು.
ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಯಕ್ಷಗಾನ ಮೇಳಗಳು ಡಿಸೆಂಬರ್ ತಿಂಗಳಲ್ಲಿ ತಿರುಗಾಟ ಪ್ರಾರಂಭಿಸಿ, ಒಂದು ತಿಂಗಳು ಪೂರ್ಣ ಗೊಳ್ಳುವ ಮುಂಚಿತವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಯಕ್ಷಗಾನದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುವ ನಮಗೆ ಯಕ್ಷಗಾನ ಪ್ರದರ್ಶನದಿಂದ ದುಡಿಮೆಯಾಗಬೇಕಿದೆ. ನಮ್ಮನ್ನು ನಂಬಿಕೊಂಡಿರುವ ಕುಟುಂಬ, ಮಕ್ಕಳ ವಿದ್ಯಾಬ್ಯಾಸ, ಮಾಡಿಕೊಂಡಿರುವ ಸಾಲದ ಹೊರೆ ತೀರಿಸುವುದಕ್ಕೆ ಅನ್ಯಮಾರ್ಗವಿಲ್ಲ. ಕಲಾವಿದರಾಗಿ ದುಡಿಯುವ ನಾವುಗಳು ಆರ್ಥಿಕವಾಗಿ ಸಬಲರಾಗಿಲ್ಲ ಎಂದು ಅವರು ತಮ್ಮ ಆಳಲನ್ನು ತೋಡಿಕೊಂಡರು.
ಸರಕಾರ ವಿಧಿಸಿದ ರಾತ್ರಿ ಕರ್ಪ್ಯೂವಿನಿಂದ ಯಕ್ಷಗಾನ, ರಂಗಭೂಮಿ ಕಲಾವಿದರಿಗೆ ಬಹಳಷ್ಟು ತೊಂದರೆಯಾಗಿದೆ. ನಮ್ಮ ಜೀವನ ಪ್ರಾರಂಭ ಗೊಳ್ಳುವುದೇ ಸೂರ್ಯ ಅಸ್ತಂಗತನಾದ ನಂತರವಷ್ಟೆ! ಹಗಲು ಸಮಯದಲ್ಲಿ ಪ್ರದರ್ಶನ ನೀಡುವುದಕ್ಕೆ ಸಾಧ್ಯವಿಲ್ಲ.
ಕರಾವಳಿ ಭಾಗದ ಜನರ ಜೀವನದ ಅವಿಭಾಜ್ಯ ಅಂಗವಾಗಿ ಯಕ್ಷಗಾನ ಗುರುತಿಸಿಕೊಂಡಿದ್ದು, ಸಾವಿರಾರು ಕಲಾವಿದರು ಯಕ್ಷಗಾನ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ ಎಂದು ಕಲಾವಿದರು ತಿಳಿಸಿದ್ದಾರೆ.
ತೆಂಕು ಹಾಗೂ ಬಡಗು ತಿಟ್ಟಿನಲ್ಲಿ ಧರ್ಮಸ್ಥಳ, ಕಟೀಲು (ಆರು ಮೇಳ), ಮಂದಾರ್ತಿ (ಐದು ಮೇಳ), ಮಾರಣಕಟ್ಟೆ (ಮೂರು ಮೇಳ), ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಪಾವಂಜೆ, ಬೊಳ್ಳಂಬಳ್ಳಿ, ಶನೀಶ್ವರ, ಹನುಮಗಿರಿ, ಸೌಕೂರು, ಮಡಾಮಕ್ಕಿ, ಹಾಲಾಡಿ, ಗೋಳಿಗರಡಿ(ಸಾಸ್ತಾನ), ಸಿಗಂದೂರು, ನೀಲಾವರ, ಅಮೃತೇಶ್ವರಿ, ಮಂಗಳಾದೇವಿ, ಹಟ್ಟಿಯಂಗಡಿ, ಸಸೀಹಿತ್ಲು, ಸುಂಕದಕಟ್ಟೆ, ಬಪ್ಪನಾಡು, ಬೆಂಕಿನಾಥೇಶ್ವರ, ಮೇಗರವಳ್ಳಿ, ಚಿರುಂಬ ಗವತಿ ಇತ್ಯಾದಿ ಯಕ್ಷಗಾನ ಮೇಳಗಳಿವೆ. ಪ್ರತಿಯೊಂದು ತಂಡದಲ್ಲಿ 50 ಕಲಾವಿದರು ಹಾಗೂ ನೇಪಥ್ಯ ಕೆಲಸಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ನಡುವೆ ಕರ್ಪ್ಯೂ, ಲಾಕ್ ಡೌನ್ ಘೋಷಣೆ ಮಾಡಿದಾಗ ವೃತಿತಿಪರ ಯಕ್ಷಗಾನ ಕಲಾವಿದರ ಹಿತವನ್ನು ಕಡೆಗಣಿಸಬಾರದು. ರಾಜ್ಯದಲ್ಲಿ ಕರ್ಪ್ಯೂ ವಿಧಿಸುವುದಾದರೆ ರಾತ್ರಿ 12:00 ಗಂಟೆಯವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಪೂರ್ವ ನಿಗಧಿತ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಬೇಕು. ಕರ್ಪ್ಯೂವಿನಂತಹ ಕಠಿಣ ನಿರ್ಧಾರ ಕೈಗೊಳ್ಳುವಾಗ ಕಲಾವಿದರ ಜೀವನಕ್ಕೆ ದ್ರತೆ ಕಲ್ಪಿಸಬೇಕು ಎಂದು ಕಲಾವಿದರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದರುಗಳಾದ ಮಂಜುನಾಥ್, ದೇವೇಂದ್ರ ಜಿ, ಶರತ್ ಶೆಟ್ಟಿ, ಸಂದೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ