ಪೋಕ್ಸೋ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷ್ಯ ತೋರಿದ ಆರೋಪದಡಿ ಪಿಎಸ್‌ಐ ಓರ್ವರನ್ನು ಅಮಾನತು ಮಾಡಲಾಗಿದೆ.
ಅದೇ ರೀತಿ ಮಹಿಳಾ ಠಾಣಾ ಸಿಬ್ಬಂದಿ ಪೊಲೀಸ್ ಠಾಣೆಯೊಳಗೇ ಮದ್ಯದ ಪಾರ್ಟಿ ಮಾಡಿದ್ದಾರೆ ಎಂದು ಐವರನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ಜಾರೆ.
ಪಾರ್ಟಿ ಮಾಡಿರುವುದಕ್ಕೆ ಸಿಸಿಟಿವಿ ದಾಖಲೆಯಿದ್ದು, ಈ ಬಗ್ಗೆ ಸಿಸಿಪಿ, ಡಿಸಿಪಿ ತನಿಖೆ ನಡೆಸಿದ್ದಾರೆ. ಈ ಮೂಲಕ ಅವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಯ ಇಬ್ಬರು ಎಎಸ್‌ಐ, ಇಬ್ಬರು ಹೆಡ್ ಕಾನ್ಸ್ಟೇಬಲ್ ಹಾಗೂ ಓರ್ವ ಕಾನ್ಸ್ಟೇಬಲ್ ಅಮಾನತುಗೊಂಡಿದ್ದಾರೆ.
ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಬಂಡಾರು ಮತ್ತುಕೇಂದ್ರ ಉಪವಿಭಾಗದ ಎಸಿಪಿ ಪಿಎ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಡಿಸಿಪಿ ಹರಿಂ ಶಂಕರ್ ಅವರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ