Slider

ಉಡುಪಿ:-ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ‌ಗೆ ವಿರೋಧ ವ್ಯಕ್ತಪಡಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ 6-1-2022

ಉಡುಪಿ: ಸರ್ಕಾರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ‌ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು "ಬೆಂಗಳೂರಿನಲ್ಲಿ ಒಂದು ದಿನಕ್ಕೆ ಸುಮಾರು 2000 ಕರೋನಾ ಸೋಂಕು ಪತ್ತೆಯಾದ ತಕ್ಷಣ ಉಡುಪಿ , ಮಂಗಳೂರಿನ ಪ್ರಮುಖ ಸಮುದ್ರ ತೀರದಲ್ಲಿ ಶನಿವಾರ , ರವಿವಾರದ ವ್ಯಾಪಾರವನ್ನೇ ನಂಬಿಕೊಂಡು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಕುಟುಂಬಗಳ ಹೊಟ್ಟೆಗಳಿಗೆ ಏಕೆ ಬೀಗ ಹಾಕಬೇಕು" ಎಂದು ಪ್ರಶ್ನಿಸಿದ್ದಾರೆ.
ಈ ಸಂಪೂರ್ಣವಾಗಿ ಜನಪರ ಸಂವೇದನೆಯನ್ನು ಕಳೆದುಕೊಂಡಿದೆ, ಪ್ರಧಾನಿ ಮೋದಿ ದೇಶಾದ್ಯಂತ ಮೊದಲು ಲಾಕ್ ಡೌನ್ ಅನ್ನು ಹೇರಿದರು. ಈಗ ಎರಡನೇ ಬಾರಿ ಲಾಕ್ ಡೌನ್ ಹೇರುವ ವಿಚಾರದ ಕುರಿತು ಆಯಾ ರಾಜ್ಯದ ಸರ್ಕಾರಗಳಿಗೆ ಜವಾಬ್ದಾರಿ ನೀಡಲಾಯಿತು.

ಆದರೆ ಮೂರನೇ ಲಾಕ್ ಡೌನ್ ವಿಧಿಸುವ ಕುರಿತು ಜಿಲ್ಲಾಮಟ್ಟದಲ್ಲಿ ಸಚಿವರು ಹಾಗೂ ಜಿಲ್ಲಾಡಳಿತ ಸೇರಿ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಬೇಕೊ ಬೇಡವೊ ಎನ್ನುವ ಕುರಿತು ನಿರ್ಧರಿಸಬಹುದಲ್ಲಾ ಎಂದು ಸಲಹೆ ನೀಡಿದ್ದಾರೆ.

ಹಿಂದೆ ಮೂರು ಬಾರಿ ಶಾಸಕರಾಗಿ , ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಕಟ್ಟಿದ ನಮ್ಮ ರಘುಪತಿ ಭಟ್ಟರ ಮಾತಿಗೆ ಕಿಂಚಿತ್ತೂ ಬೆಲೆ ಕೊಡದ ಈ ಸರ್ಕಾರ ಆಪರೇಷನ್ ಮೂಲಕ ಬಿ.ಜೆ.ಪಿ ಸೇರಿದ ಡಾ. ಸುಧಾಕರ್ ಹೇಳಿದ ಎಲ್ಲಾ ಮಾತುಗಳನ್ನು ಕೇಳುವುದು ವಿಪರ್ಯಾಸ.

ಈ ನಿಟ್ಟಿನಲ್ಲಿ ರಘುಪತಿ ಭಟ್ ಬಿ.ಜೆ.ಪಿ ಯನ್ನ ಬಿಡಬೇಕು ಇಲ್ಲವಾದರೆ ಉಡುಪಿಯ ಜನತೆ ಇನ್ನು ಅಪ್ಪಿ ತಪ್ಪಿಯೂ ಬಿ.ಜೆ.ಪಿಗೆ ಮಾತು ಹಾಕಬಾರದು ಎಂದಿದ್ದಾರೆ.
ವರದಿ:-ಉಡುಪಿ ಫಸ್ಟ್.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo