ಜನವರಿ. 4 ರ ಮುಂಜಾನೆ ಶಿರ್ವ ಜಾರಂದಾಯ ದೈವಸ್ಥಾನ ರೋಡ್ ನಲ್ಲಿ ಎರಡು ವಾಹನಗಳ ಬ್ಯಾಟರಿ ಕಳವು ಮಾಡಿರುವ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ರಾಜೇಶ್ ಆರ್.ಪ್ರಭು ಎಂಬವರ ಮನೆಯ ಬಳಿ ತೆರೆದ ಕಾರು ಶೆಡ್‌ನಲ್ಲಿ ಇರಿಸಿದ್ದ ಎರಡು ಟಾಟಾ ಏಸ್ ವಾಹನದ ಎರಡು ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 9,000ರೂ. ಎಂದು
ಅಂದಾಜಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ