Slider

ಉಡುಪಿ:-ಆಂಬುಲೆನ್ಸ್‌ಗೆ 40ಕಿ.ಮೀ ವರೆಗೂ ದಾರಿ ಬಿಡದೆ ಸತಾಯಿಸಿದ ಕಾರು ಚಾಲಕ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ 20-1-2022

ಆಸ್ಪತ್ರೆಯಿಂದ ರೋಗಿಯನ್ನು ಸಾಗಿಸುವ ವೇಳೆ ಆಂಬುಲೆನ್ಸ್ ಚಾಲಕನಿಗೆ ಎದುರಿನಿಂದ ಸಾಗುತ್ತಿದ್ದ ಕಾರಿನ ಚಾಲಕ ದಾರಿಯನ್ನು ಬಿಡದೆ ಮೊಂಡಾಟ ನಡೆಸಿದ ಘಟನೆ ಮಂಗಳೂರಿನಿಂದ ಭಟ್ಕಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಸಾಗಿಸಬೇಕಿತ್ತು. ಈ ಸಂದರ್ಭ ಆಂಬುಲೆನ್ಸ್ ಚಾಲಕ ಆಯುಬ್ ಎಂಬಾತರಿಗೆ ಮಂಗಳೂರಿನಿಂದ ಉಡುಪಿಯ ತನಕ kA.19.MD.6843 ನಂಬರಿನ ಕೆಂಪು ಬಣ್ಣದ Chevrolet beatಕಾರು ದಾರಿಯನ್ನು ನೀಡದೆ ಕಾರಿನ ಚಾಲಕ ಮೊಂಡಾಟ ಪ್ರದರ್ಶಿಸಿದ್ದಾನೆ .

ಇನ್ನು ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿರುವ ಆಂಬುಲೆನ್ಸ್ ಚಾಲಕ ಸುಮಾರು 40ಕಿ.ಮೀ ವರೆಗೂ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದಾನೆ, ಈ ವೇಳೆ ಆಂಬುಲೆನ್ಸ್ ನಲ್ಲಿದ್ದ ರೋಗಿಯೂ ಕೂಡ ಗಂಭೀರ ಸ್ಥಿತಿಗೆ ತಲುಪಿದ್ದರು ಎಂದಿದ್ದಾರೆ. 

ನಿನ್ನೆ ನಡೆದ ಈ ಘಟನೆ ಬೇರೆ ಯಾವ ಆಂಬುಲೆನ್ಸ್ ಚಾಲಕನಿಗೆ ಹಾಗೂ ರೋಗಿಯ ಮನೆಯವರಿಗು ಆಗಬಾರದು ಹಾಗೂ ಕಾರಿನ ಚಾಲಕನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಉಡುಪಿ ಫಸ್ಟ್ ನ ಜೊತೆ‌ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವರದಿ:-ಉಡುಪಿ ಫಸ್ಟ್.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo