ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಹೆದ್ದಾರಿಯಲ್ಲಿ ಭಾನುವಾರ ನಸುಕಿನ ವೇಳೆ ಗೋಕಳ್ಳರು ಅಟ್ಟಹಾಸದಿಂದ ಮೆರೆದ ಘಟನೆ ನಡೆದಿದೆ.
ಇ ವೇಳೆ ಆರೋಪಿಗಳು ಪೋಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ನಸುಕಿನ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತಿದ್ದ ವೇಳೆ ಗೋವುಗಳನ್ನು ತುಂಬಿದ ಕಾರು ಮತ್ತು ರಕ್ಷಣೆ ಒದಗಿಸಲು ಬರುತಿದ್ದ ಬೈಕನ್ನು ರಸ್ತೆಗೆ ಬ್ಯಾರಿಕೇಡ್ ಅಡ್ಡ ಇಟ್ಟು ತಡೆಯಲು ಯತ್ನಿಸಿದ್ದಾರೆ. ಆ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಗಾಯಗೊಂಡರೂ ಎದೆ ಗುಂದದೆ ಪೊಲಿಸ್ ಜೀಪಿನಲ್ಲಿ ಕಾರು ಮತ್ತು ಬೈಕ್ ಅನ್ನು ಬೆನ್ನತ್ತಿದ್ದು. ಇದೆ ವೇಳೆ ಗೋವುಗಳಿದ್ದ ಕಾರು ಪರಾರಿಯಾಗಿದೆ. ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು ಆತನನ್ನು ಪೊಲಿಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬೈಕ್ ಸಂಪೂರ್ಣ ಹಾನಿಯಾಗಿದ್ದು, ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಒರ್ವ ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ