ಮಂಗಳೂರು: ಡಿಸೆಂಬರ್. 3 ರ ಬೆಳಿಗ್ಗೆ ಉಳ್ಳಾಲ ಕ್ಷೇತ್ರದ ಮಾಜಿ ಶಾಸಕ ಬಿ.ಎ.ಇದಿನಬ್ಬ ಅವರ ಪುತ್ರನ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ ಐ ಎ)ದ ಅಧಿಕಾರಿಗಳ ತಂಡ ಮತ್ತೆ ದಾಳಿ ನಡೆಸಿದ್ದು, ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ.ಭಾಷಾ ಸೊಸೆ ದೀಪ್ತಿ ಆಲಿಯಾಸ್ ಮರಿಯಂ ರನ್ನು ಎನ್ ಐ ಎ ವಶಕ್ಕೆ ಪಡೆದಿದೆ. ಐಸಿಎಸ್ ಜೊತೆ ನಂಟಿನ ಆರೋಪದ ಹಿನ್ನೆಲೆಯಲ್ಲಿ ಮರಿಯಂ ಬಂಧನವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ ಐ ಎ ಅಧಿಕಾರಿಗಳು ಮರಿಯಂ ಅವರನ್ನು ವಶಕ್ಕೆ ಪಡೆದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದೊಯ್ದಿದ್ದಾರೆ.
ಮರಿಯಂ ಅವರ ಆರೋಗ್ಯ ತಪಾಸಣೆಯನ್ನು ನಗರದ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಆ ಬಳಿಕ ಎನ್ ಐ ಎ ಅಧಿಕಾರಿಗಳು ನೇರವಾಗಿ ದೆಹಲಿಗೆ ಕರೆದೊಯ್ದಿವ ಬಗ್ಗೆ ಸಾಧ್ಯತೆ ಇದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.
ಎನ್ ಐ ಎ ಯ ಸಹಾಯಕ ತನಿಖಾಧಿಕಾರಿ ಕ್ರಿಶ ಕುಮಾರ್ (ಡಿಎಸ್ಪಿ) ಅವರ ನೇತೃತ್ವದ ಅಜಯ್ ಸಿಂಗ್ ಪಿ ಐ, ಮೋನಿಕಾ ಧಿಕ್ವಾಲ್ ಮತ್ತಿತರ ಎನ್ ಐ ಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಎನ್ ಐ ಎ ಅಧಿಕಾರಿಗಳು ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಮನೆಗೆ ಮನೆ ಮೇಲೆ ಕಳೆದ ಅಗಸ್ಟ್ 4 ರಂದು ದಾಳಿ ನಡೆಸಿದ್ದು, ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿತ್ತು.
ಈ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆ ಅನುಮಾನವಿದ್ದು, ಆಕೆಗೆ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿಬಿಟ್ಟಿದ್ದರು. ಇದೀಗ ಮತ್ತೆ ದಾಳಿ ನಡೆಸಿದ ಬಳಿಕ ಮರಿಯಂಳನ್ನು ಬಂಧಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ