ಕುಂದಾಪುರ:-ಕೋಟೇಶ್ವರದ ಯುವಮೆರಿಡಿಯನ್ ಹಾಲ್‌ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಿಂದ ಚಿನ್ನ ಕದ್ದ ಅಂತರ್ ರಾಜ್ಯ ಕಳ್ಳರಿಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಮೂಲದ , ಧನರಾಜ್ ವಿಜಯ ಪರ್‌ಮಾರ್ ( 42) ಹಾಗೂ ಹಾಗೂ ಅಜಯಸಿಂಗ್ ಕಿಶೋರ್ (23) ಎಂದು ತಿಳಿದು ಬಂದಿದೆ.
ಕುಂದಾಪುರದ ಕೋಟೇಶ್ವರ ಯುವ ಮೆರಿಡಿಯನ್ ಹಾಲ್‌ನಲ್ಲಿ, ಡಿ 29ರಂದು ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಪರಿಶೀಲನೆ ವೇಳೆ ದೃಢವಾಗಿತ್ತು. ಈ ಬಗ್ಗೆ ಕಳ್ಳತನವಾದ ಅಂಗಡಿ ಮಾಲೀಕರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳವಾದ 2 ಚಿನ್ನದ ಬಳಿಗಳು ಸುಮಾರು 43 ಗ್ರಾಂ ಇದ್ದು, ಅವುಗಳ ಅಂದಾಜು ಮೌಲ, ರೂ 2,86,000/- ಆಗಬಹುದು ಎಂದು ಹೇಳಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆಬೀಸಿತ್ತು.
ಸದ್ಯ ಮಹಾರಾಷ್ಟ್ರದ ಮೂಲದ , ಧನರಾಜ್ ವಿಜಯ ಪರ್‌ಮಾರ್ ( 42) ಹಾಗೂ ಅಜಯಸಿಂಗ್ ಕಿಶೋರ್ (23) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ