ಅಜೆಕಾರು:-ಚಾಲಕನ ಅಜಾಗರುಕತೆಯಿಂದ ವಿದ್ಯಾರ್ಥಿನಿಯೋರ್ವಳು ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಅಜೆಕಾರು ಕಾಡುಹೊಳೆ ಎಂಬಲ್ಲಿ ಸಂಭವಿಸಿದೆ.
ಖಾಸಗಿ ಕಾಲೇಜಿನ ಸಿ.ಎ ವಿದ್ಯಾರ್ಥಿನಿ ಅಭಿಜ್ಞಾ (18) ಗಾಯಗೊಂಡವರು.
ಇವರು ಕಾಲೇಜಿನಿಂದ ಮನೆಗೆ ಹೋಗುವ ಸಂದರ್ಭದಲ್ಲಿ, ಜನವರಿ 1ರಂದು ಲಕ್ಷ್ಮೀಶ ಬಸ್ಸಿನಲ್ಲಿ ಅಜೆಕಾರು ಕಡೆಯಿಂದ ಕಾಡುಹೊಳೆ ಜಂಕ್ಷನ್ ಕಡೆಗೆ ಬಂದಿದ್ದಳು. ಈ ವೇಳೆ ನಿಂತಿದ್ದ ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾ ಇಳಿಯುವ ಸಂದರ್ಭ ಬಸ್ಸಿನ ಚಾಲಕನು ಏಕಾಏಕಿಯಾಗಿ ಬಸ್ಸನ್ನು ಮುಂದಕ್ಕೆ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಮಣಿಪಾಲ KMC ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸು ಚಾಲಕ ಶ್ರೀಕಾಂತ್ ವಿರುದ್ಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ