ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಬಂದರಿನಿಂದ ಹೊರಟಿದ್ದ ದೋಣಿಯು ದಡದಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಕೆಳಭಾಗಕ್ಕೆ ಏನೋ ಬಡಿದ ಪರಿಣಾಮ ಮಗುಚಿ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣವೇ ಅಲ್ಲೆ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ರಾಮದೂತ್ ಬೋಟಿನ ಮೀನುಗಾರರು ರಕ್ಷಣೆಗೆ ಮುಂದಾಗಿದ್ದು 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.
ದೋಣಿಯನ್ನು ದಡಕ್ಕೆ ಎಳೆಯಲು ಹರಸಾಹಸಪಟ್ಟರಾದರೂ ದೋಣಿಗೆ ನೀರು ನುಗ್ಗಿದ್ದರಿಂದ ದೋಣಿ ನೀರಿನಲ್ಲಿ ಮುಳುಗಿತ್ತು. ಪರಿಣಾಮ ಬೋಟ್, ಮೀನು ಹಿಡಿಯುವ ಬಲೆ, ಡೀಸೆಲ್ ಹಾಗೂ ಮೀನು ಹಿಡಿಯುವ ಸಲಕರಣೆಗಳ ಸಹಿತ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆನ್ನಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ