Slider


ಉಡುಪಿ:-ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ಇಬ್ಬರು ಯುವತಿಯರು ಸೇರಿದಂತೆ ನಾಲ್ವರ ಬಂಧನ 28-1-2022

ಉಡುಪಿ : ಜಿಲ್ಲೆಯ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. 

ಜೊತೆಗಿದ್ದ ಇಬ್ಬರು ಹುಡುಗಿಯರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ ಪೊಲೀಸರಿಂದ ಬಂಧಿತರಾದ ಆರೋಪಿಗಳಲ್ಲಿ ಗುರುರಾಜ್, ವಿಜಯ ಶೆಟ್ಟಿ, ಹೇಮಂತ್, ಸಂದೀಪ್ ಮೊಗವೀರ ಎಂದು ತಿಳಿದು ಬಂದಿದೆ. ಲಾಡ್ಜ್ ಮಾಲೀಕ ರಮೇಶ್ ಶೆಟ್ಟಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ ನಗರದ ಹೃದಯ ಭಾಗದಲ್ಲಿರುವ ಎಸ್‌.ಆರ್.ಯಾತ್ರಿ ನಿವಾಸ ಎಂಬ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ಅವರ ತಂಡ ದಾಳಿ‌ ನಡೆಸಿದಾಗ ಇಬ್ಬರು ಹುಡುಗಿಯರು ಮತ್ತು ನಾಲ್ಕು ಮಂದಿ‌ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ರಮೇಶ್ ಶೆಟ್ಟಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೊಲೀಸರಿಗೆ ಕೆಲವು ಸಮಯದಿಂದ ಇಲ್ಲಿ‌ ಅನೈತಿಕ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಇಲ್ಲಿ ಸಲಿಂಗಕಾಮಿಗಳಿಗೆ ಕೂಡ ರೂಮ್ ಕೋಡುತ್ತಾರೆ ಎಂಬ ಆರೋಪಗಳಿತ್ತು. ಪೊಲೀಸರು ದಾಳಿ ನಡೆಸುವಾಗ ಸಲಿಂಗಕಾಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಯಾತ್ರಿ ನಿವಾಸ ಎಂಬ ಲಾಡ್ಜ್ ಉಡುಪಿ ನಗರಸಭೆಗೆ ಸೇರಿದ್ದು. ಈ ಲಾಡ್ಜ್ ನ್ನು ರಮೇಶ್ ಶೆಟ್ಟಿ ಎಂಬವ ನಡೆಸುತ್ತಿದ್ದ ಎನ್ನಲಾಗಿದೆ. ನಗರಸಭೆಯವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು‌ ಆಗ್ರಹಿಸಿದ್ದಾರೆ.

ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಜಯಂತ್ ಮತ್ತು ಅವರ ತಂಡ ಐದು ಮಂದಿ ಮೇಲೆ ಕೇಸು ದಾಖಲಿಸಿಕೊಂಡು ನಾಲ್ಕು ಮಂದಿ ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo