Slider

ಕುಂದಾಪುರ:-ಜೋಡೆತ್ತಾನಲ್ಲಿ ಬಂದ ಮದುಮಗಳು28-1-2022

ಕುಂದಾಪುರ: ಇಲ್ಲಿನ ಮದುಮಗಳನ್ನು ಜೋಡೆತ್ತಿನ ಗಾಡಿಯಲ್ಲಿ ಕರೆತಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.

ಕಟ್ಟಿನಮಕ್ಕಿ ಬವಳಾಡಿ ಮಹಾಬಲ ಆಚಾರ್ಯ ಅವರ ಪುತ್ರಿ ಪ್ರತಿಮಾ ಹಾಗೂ ಕಟ್‌ಬೆಲ್ತೂರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್‌ ಅವರ ವಿವಾಹ ಜನವರಿ.26 ರಂದು ಕಿರಿಮಂಜೇಶ್ವರದ ಅರೆಹೊಳೆ ಕ್ರಾಸ್‌ನ ಮಾಂಗಲ್ಯ ಆರ್ಕೆಡ್‌ನ‌ ಚಿನ್ಮಯಿ ಸಭಾಭವನದಲ್ಲಿ ನಡೆದಿದೆ.

ಕಟ್ಟಿನಮಕ್ಕಿ ಬವಳಾಡಿಯ ಮಹಾಬಲ ಆಚಾರ್ಯ ಅವರು ಪುತ್ರಿಯ ದಿಬ್ಬಣವನ್ನು ಮದುವೆ ಮಂಟಪಕ್ಕೆ ಅವರು ಕರೆತರಲು ಬೈಂದೂರಿನ ಸೀತಾರಾಮ ಶೆಟ್ಟಿ ಅವರ ಎತ್ತಿನಗಾಡಿಯನ್ನು ನಿಗದಿಪಡಿಸಿದರು.

ಕಿರಿಮಂಜೇಶ್ವರವರೆಗೆ ಕಾರಿನಲ್ಲಿ ಬಂದು ಅಲ್ಲಿಂದ ಜೋಡೆತ್ತಿನ ಗಾಡಿ ಯಲ್ಲಿ ಮದುಮಗಳು ಸಾಗಿ ಬಂದಳು. ದಾರಿಯುದ್ದಕ್ಕೂ ಸಾರ್ವಜನಿಕರು ಈ ಸಂಭ್ರಮವನ್ನು ಕಣ್ತುಂಬಿಕೊಂಡರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo