Slider

ಉಡುಪಿ:-ಹಿಜಾಬ್ ವಿವಾದದ ಹಿಂದೆ ಕ್ಯಾಂಪಸ್ ಫ್ರಂಟ್, SDPI ಕೈವಾಡ ಶಾಸಕ ರಘುಪತಿ ಭಟ್ ಗಂಭೀರ ಆರೋಪ27-1-2022

ಉಡುಪಿ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿದ ಶಾಸಕ ರಘುಪತಿ ಭಟ್ ಇದರ ಹಿಂದೆ ಕ್ಯಾಂಪಸ್ ಫ್ರಂಟ್,ಎ.ಎಸ್.ಯು.ಐ ಯಂತಹ ಸಂಘಟನೆಗಳ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಈ ಸಂಬಂಧ ಮುಸ್ಲಿಂ ಮುಖಂಡರ ಜೊತೆಗೆ ಎರಡು ಬಾರಿ ಮಾತುಕತೆ ನಡೆದಿದೆ.
ಖಾಜಿಯವರು,ಮದ್ರಸಾ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ. ಉಡುಪಿ ಜಿಲ್ಲೆಯ ಮುಖಂಡರಿಗೆ ಈ ವಿಚಾರ ಮನವರಿಕೆ ಮಾಡಲಾಗಿದೆ ಎಂದರು.

ಯಾವುದೇ ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳುವುದಕ್ಕೆ ಅವಕಾಶ ಇಲ್ಲ ಎಂದ ಶಾಸಕರು, ಆರು ಮಕ್ಕಳಿಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಲು ಆಗುತ್ತಾ? ಆಗ ಉಳಿದ ಧರ್ಮದವರು ಕೇಸರಿ ಶಾಲಿಗೆ ಅವಕಾಶ ಕೇಳುತ್ತಾರೆ. ಆವಾಗ ಶಾಲೆ ಶಿಕ್ಷಣ ಕೇಂದ್ರವಾಗದೆ ಧಾರ್ಮಿಕ ಸಂಘರ್ಷದ ಕೇಂದ್ರ ವಾಗುತ್ತದೆ. ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರ ಅವಕಾಶ ಕೊಟ್ಟರೆ ನಮ್ಮ ವಿರೋಧ ಇಲ್ಲ ಎಂದು ಅವರು ಹೇಳಿದ್ದಾರೆ.

ಅವರಿಗೆ ಅನ್ ಲೈನ್ ಕ್ಲಾಸ್ ಗೆ ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ ಎಂದ ಶಾಸಕರು, ಡಿಸೆಂಬರ್ 30 ಕಾಪುವಿನಲ್ಲಿ ಎಸ್.ಡಿ.ಪಿ.ಐ ಮೂರು ಸ್ಥಾನ ಗೆದ್ದಿದೆ. ಅದಾಗಿ ಡಿಸೆಂಬರ್. 31ಕ್ಕೆ ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಮಕ್ಕಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಖಂಡಿತ ಇದರ ಹಿಂದೆ ಕೆಲವು ಸಂಘಟನೆಗಳ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo